Share this news

ಬೆಂಗಳೂರು: ಚುನಾವಣಾ ರ್ಯಾಲಿಯಲ್ಲಿ ಸಿದ್ದರಾಮಯ್ಯ ಅವರಿಗೆ ಮಾಲಾರ್ಪಣೆ ಮಾಡಿದ ರಿಯಾಜ್ ಆತ ತುಂಬಾ ಒಳ್ಳೇ ಹುಡುಗ, ಅವನಿಗೆ ಗನ್ ಲೈಸೆನ್ಸ್ ಇದೆ ಗನ್ ಇಟ್ಟುಕೊಂಡು ಮಾತ್ರಕ್ಕೆ ಇದು ದೊಡ್ಡ ವಿಚಾರವಲ್ಲ ಎಂದು ಕಾಂಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ ಅವರು ಹೇಳಿದ್ದಾರೆ.

ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಪ್ರಚಾರ ನಡೆಸುವಾಗ ಭಾರೀ ಭದ್ರತಾ ಲೋಪವಾಗಿತ್ತು.

ವಿಲ್ಸನ್ ಗಾರ್ಡನ್ ಬಳಿ ತೆರೆದ ವಾಹದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತ ರಿಯಾಜ್ ಎಂಬಾತ ಸೊಂಟದಲ್ಲಿ ಗನ್ ಇರಿಸಿಕೊಡು ಪ್ರಚಾರದ ವಾಹನ ಏರಿ ಮುಖ್ಯಮಂತ್ರಿಗಳಿಗೆ ಹಾರ ಹಾಕಿದ್ದು, ಈ ಘಟನೆ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ ಅವರು, ಹೂವಿನ ಹಾರ ತೆಗೆದುಕೊಂಡು ಎಲ್ಲರೂ ನಿಂತಿದ್ದರು. ನಾನೇ ರಿಯಾಜ್​ಗೆ ಹೂವಿನ ಹಾರ ಹಾಕಲು ಮೇಲೆ ಕರೆದೆ. ಹಾಗಾಗಿ ರಿಯಾಜ್ ಬಂದು ಹೂವಿನ ಹಾರ ಹಾಕಿದ್ದಾನೆ. ಅದು ಬಿಟ್ಟರೇ ಬೇರೆ ಯಾವುದೇ ಉದ್ದೇಶ ಇರಲಿಲ್ಲ. ಇದು ಆಕಸ್ಮಿಕವಾಗಿ ನಡೆದಿರುವ ಘಟನೆ ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಕುರಿತು
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಮಾತನಾಡಿ, ಇಲ್ಲಿ ಭದ್ರತಾ ವೈಫಲ್ಯ ಯಾವುದೂ ಆಗಿಲ್ಲ. ಅವರವರ ರಕ್ಷಣೆಗೆ ಅವರು ಗನ್​ ಇಟ್ಟುಕೊಂಡಿರುತ್ತಾರೆ. ನನ್ನ ಜೊತೆನೂ ಗನ್ ಮ್ಯಾನ್​ಗಳು ಇದ್ದಾರೆ. ವಿಪಕ್ಷಗಳು ಒಳ್ಳೆಯ ವಿಷಯ ಇದ್ದರೆ ಮಾತನಾಡಬೇಕು ಎಂದು ಹೇಳಿದ್ದಾರೆ. ಘಟನೆ ಬಳಿಕ ರಿಯಾಜ್ ಅಹಮದ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದಿದ್ದಾರೆ

 

 

 

 

Leave a Reply

Your email address will not be published. Required fields are marked *