ಕಾರ್ಕಳ: ವಿವಿಧ ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಕಳ ತಾಲೂಕಿನಲ್ಲಿ ಮೂವರು ಮೃತಪಟ್ಟಿದ್ದಾರೆ.
ಮುಂಡ್ಕೂರಿನ ಅಶ್ವಿತ್ ಎಂಬವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು ಕಾಮಾಲೆ ರೋಗದಿಂದ ಬಳಲುತ್ತಿದ್ದರು. ನ.15 ರಂದು ಸಂಜೆ ಪೇಟೆಗೆ ಹೋಗುತ್ತೇನೆಂದು ಹೇಳಿ ಹೋದವರು ಮನೆಗೆ ವಾಪಾಸಾಗಿರಲಿಲ್ಲ. ಆದರೆ ನ.16 ರಂದು ಅವರ ಸಂಬAಧಿಯೊಬ್ಬರು ಕರುಣಾಕರ ಎಂಬವರ ಬಾವಿಯ ಬಳಿ ಅಶ್ವಿತ್ ಚಪ್ಪಲಿಯನ್ನು ನೋಡಿರುವುದಾಗಿ ತಿಳಿಸಿದ್ದರು. ಬಳಿಕ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದಾಗ ಸ್ಥಳಕ್ಕೆ ಧಾವಿಸಿದ ಅವರು ಬಾವಿಯಿಂದ ಅಶ್ವಿತ್ ಮೃತದೇಹ ಹೊರತೆಗೆದಿದ್ದಾರೆ.
ವಿಪರೀತ ಕುಡಿತದ ಚಟವಿದ್ದ ಅಶ್ವಿತ್ ಕಾಮಾಲೆ ರೋಗವಿದ್ದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆAದು ಶಂಕಿಸಲಾಗಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ ಮುಂಡ್ಕೂರಿನಲ್ಲಿ ಸುಧಾಕರ ಕೆ ಎಂಬವರು ಕಳೆದ 2 ತಿಂಗಳಿನಿAದ ಮನೆಯಲ್ಲಿ ಒಬ್ಬರೇ ವಾಸವಿದ್ದರು. ನ.14 ರಂದು ನೆರೆಮನೆಯವರು ಸುಧಾಕರ ರವರ ಮನೆಗೆ ಬಂದಾಗ ಪ್ರಜ್ಞೆತಪ್ಪಿ ಬಿದ್ದಿದ್ದರು. ಅವರನ್ನು ವಿಚಾರಿಸಿದಾಗ ತಾನು ವಿಷ ತೆಗೆದುಕೊಂಡಿರುವುದಾಗಿ ತಿಳಿಸಿದ್ದು ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕಿನ್ನಿಗೋಳಿ ಕೊನ್ಸೆಟ್ಟಾ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ತಂದೆ ಸುಧಾಕರ ಕೆ ರವರು ಕಳೆದ 3 ವರ್ಷಗಳಿಂದ ಪೂರ್ವಜರು ಮಾಡಿದ ಜಾಗದ ವಿಚಾರವಾಗಿ ಮನನೊಂದು ತೋಟಕ್ಕೆ ಸಿಂಪಡಿಸುವ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆAದು ಅವರ ಪುತ್ರ ದೂರು ನೀಡಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಮೂಲದ ಪರವತ್ತಪ್ಪ ಎಂಬಾತ ಕಳೆದ 4 ವರ್ಷಗಳಿಂದ ಕಾರ್ಕಳದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯಪಾನ ಮಾಡುತ್ತಿದ್ದ.ನ.16 ರಂದು ಕಾರ್ಕಳ ಕಸಬಾ ಗ್ರಾಮದ ಬಸ್ ನಿಲ್ದಾಣದ ಬಳಿ ಬಿದ್ದು ಮೃತಪಟ್ಟಿದ್ದಾನೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.