ಕಾರ್ಕಳ: ಭಾರತೀಯ ಲೋಕಸೇವಾ ಆಯೋಗ(UPSC) ನಡೆಸುವ ಪರೀಕ್ಷೆಯಲ್ಲಿ ಶೌಕತ್ ಅಝೀಮ್‌ಗೆ 345ನೇ
ಕಾರ್ಕಳ: 2024ನೇ ಸಾಲಿನ ಲೋಕಸೇವಾ ಆಯೋಗ
(ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಕಾರ್ಕಳ ಸಾಲ್ಮರದ ಶೇಖ್ ಅಬ್ದುಲ್ಲಾ ಮತ್ತು ಮೈಮುನಾ ದಂಪತಿಯ ಪುತ್ರ ಶೌಕತ್ ಅಝೀಮ್ 345ನೇ Rank ಗಳಿಸಿದ್ದು, ತಮ್ಮ IAS ಅಧಿಕಾರಿಯಾಗುವ ಕನಸನ್ನು ನನಸು ಮಾಡಿದ್ದಾರೆ. ಇವರು ತನ್ನ 9ನೇ ಬಾರಿಯ ಪ್ರಯತ್ನದಲ್ಲಿ IAS ಪರೀಕ್ಷೆಯಲ್ಲಿ ಪಾಸಾಗಿ ಕೊನೆಗೂ ಈ ಸಾಧನೆಗೈದಿದ್ದಾರೆ.
ಶೌಕತ್ ಅವರ ತಂದೆ ಟ್ರಕ್ ಚಾಲಕರಾಗಿದ್ದು ತಾಯಿ ಬೀಡಿಕಟ್ಟುವ ಕಾಯಕ ಮಾಡಿಕೊಂಡಿದ್ದಾರೆ. ಬಡತನದಲ್ಲಿಯೂ ಈ ಸಾಧನೆಗೈದಿರುವುದಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಶೌಕತ್ ಆಝೀಮ್ ಅವರು 1ರಿಂದ 5ನೇ ತರಗತಿಯವರೆಗೆ ಕಾರ್ಕಳ ಸರಕಾರಿ ಉರ್ದು ಶಾಲೆಯಲ್ಲಿ ಕಲಿತು ತದನಂತರ 5ರಿಂದ 7 ತರಗತಿಯವರಿಗೆ ಎಸ್‌ವಿಟಿ ಶಾಲೆಯಲ್ಲಿ ಹಾಗೂ ಕಾರ್ಕಳದ ಭುವನೇಂದ್ರ ಶಾಲೆಯಲ್ಲಿ ತನ್ನ ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸಿ,ಬಳಿಕ ಪಿಯು ಶಿಕ್ಷಣವನ್ನು ಕಾರ್ಕಳದ ಕೆಎಂಇಎಸ್ ನಲ್ಲಿ ಪೂರೈಸಿ, ಮೂಡುಬಿದಿರೆಯ MITE ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆದಿದ್ದಾರೆ. 2022ರಲ್ಲಿ ಬರೆದ ಭಾರತೀಯ ಲೋಕಸೇವಾ ಆಯೋಗವು ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇದೀಗ ಪುಣೆಯಲ್ಲಿನ ರಕ್ಷಣಾ ಇಲಾಖೆಯ ಅಕೌಂಟಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಸಾಧನೆ ಕಾರ್ಕಳಕ್ಕೆ ಕೀರ್ತಿ ತಂದಿದೆ.