
ಕಾರ್ಕಳ, ಡಿ.10: ಅಡಿಕೆ ಕೊಯ್ಯಲು ಮರ ಹತ್ತಿದ್ದ ವ್ಯಕ್ತಿ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿರ್ಲಾಲಿನಲ್ಲಿ ನಡೆದಿದೆ. ಕೆರ್ವಾಶೆಯ ನಾರಾಯಣ ಆರ್ ಮೃತಪಟ್ಟ ದುರ್ದೈವಿ.
ನಾರಾಯಣ ಅವರು ತೆಂಗಿನಕಾಯಿ ಹಾಗೂ ಅಡಿಕೆ ಕೊಯ್ಯುವ ಕೆಲಸ ಮಾಡಿಕೊಂಡಿದ್ದು, ಡಿ.09 ರಂದು ಶಿರ್ಲಾಲಿನ ಜಯಪ್ರಕಾಶ್ ಅರಿಗ ಅವರ ತೋಟಕ್ಕೆ ಅಡಿಕೆ ಕೊಯ್ಯಲು ಹೋಗಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ಕೂಡಲೇ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಆ ವೇಳೆಗಾಗ ಅವರು ಮೃತಪಟ್ಟಿದ್ದರು.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
.
