Share this news

 

 

 

 

ಉಡುಪಿ,ಜ.19 : ಕೃಷ್ಣನ ನಗರಿ ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ಬಹಳ ಅದ್ದೂರಿಯಾಗಿ ನೆರವೇರಿದ್ದು, ಶಿರೂರು ಮಠದ ಶ್ರೀ ವೇದವರ್ಧನ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಅಲಂಕರಿಸಿದ್ದಾರೆ.

ಭಾನುವಾರ ಬೆಳಗ್ಗೆ ಶಿರೂರು ವೇದವರ್ಧನ ಶ್ರೀಗಳ ಚೊಚ್ಚಲ ಪರ್ಯಾಯ ಮಹೋತ್ಸವದ ಭವ್ಯ ಶೋಭಾಯಾತ್ರೆ ವಿಜೃಂಭಣೆಯಿAದ ನಡೆಯಿತು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ವಿವಿಧ ಟ್ಯಾಬ್ಲೋಗಳನ್ನು ಪ್ರದರ್ಶಿಸಿದರು. ಬೆಳಗಿನ ಜಾವ, ಮೆರವಣಿಗೆ ಕಾರ್ ಸ್ಟ್ರೀಟ್ ತಲುಪಿದ ಬಳಿಕ ಮಠಾಧೀಶರು ‘ಕನಕನ ಕಿಂಡಿ’ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು, ನಂತರ ಶ್ರೀ ಚಂದ್ರಮೌಳೀಶ್ವರ ಮತ್ತು ಶ್ರೀ ಅನಂತೇಶ್ವರ ದರ್ಶನ ಪಡೆದರು.

ಕಾಪು ದಂಡತೀರ್ಥದಲ್ಲಿ ಮಧ್ಯರಾತ್ರಿ ಪುಣ್ಯಸ್ನಾನ ಮುಗಿಸಿದ ಯತಿಗಳು, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ 2:30ಕ್ಕೆ ಸರಿಯಾಗಿ ಜೋಡುಕಟ್ಟೆಗೆ ಆಗಮಿಸಿದರು. ಬಳಿಕ ಜೋಡುಕಟ್ಟೆಯಿಂದ ವೈಭವದ ಮೆರವಣಿಗೆ ಆರಂಭಗೊAಡು ಸುಮಾರು ಎರಡು ಕಿ.ಮೀ ಸಾಗಿ ರಥಬೀದಿಯಲ್ಲಿ ಸಂಪನ್ನಗೊAಡಿತು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮುಂದಿನ ಎರಡು ವರ್ಷಗಳ ಶ್ರೀ ಕೃಷ್ಣ ಪೂಜಾ ಕೈಂಕರ್ಯವನ್ನು ಹಸ್ತಾಂತರಿಸಿದರು.
ಅಷ್ಟ ಮಠಾಧೀಶರಿಗೆ ಸಾಂಪ್ರದಾಯಿಕ ದರ್ಬಾರ್ ಮತ್ತು ಮಾಲಿಕೆ ಮಂಗಳಾರತಿ ಬಡಗು ಮಾಳಿಗೆಯ ಅರಳು ಗದ್ದುಗೆಯಲ್ಲಿ ನಡೆಯಿತು. ನಂತರ ರಾಜಾಂಗಣದಲ್ಲಿ ‘ಪರ್ಯಾಯ ದರ್ಬಾರ್’ ನಡೆಯಿತು, ಅಲ್ಲಿ ಅಷ್ಟ ಮಠದ ಮಠಾಧೀಶರು ಮತ್ತು ಪರ್ಯಾಯ ಮಠದ ಯತಿಗಳು ಆಶೀರ್ವದಿಸಿದ ಸಂದೇಶಗಳನ್ನು ನೀಡಿದರು, ನಂತರ ಶ್ರೀ ಕೃಷ್ಣನಿಗೆ ಮಹಾಪೂಜೆ ಮತ್ತು ಪಲ್ಲಪೂಜೆ ಮಾಡಲಾಯಿತು.

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *