

ಹೆಬ್ರಿ,ಸೆ 13: ವಿಪರೀತ ಮದ್ಯಪಾನದ ಚಟ ಹೊಂದಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ದೊರಿಯಾಲ್ ನಿವಾಸಿ ನಾಗೇಶ್(32) ಎಂಬವರು ಆತ್ಮಹತ್ಯೆ ಮಾಡಿಕೊಂಡ ಯುವಕ.ಅವರು ಕಳೆದ ಹಲವು ವರ್ಷಗಳಿಂದ ಮದ್ಯಪಾನ ಮಾಡುವ ಚಟ ಹೊಂದಿದ್ದರು. ಇದಲ್ಲದೇ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು.
ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಪಿರ್ಯಾದಿದಾರ ಅನುಷಾ ಪ್ರಾಯ: 29 ವರ್ಷ ತಂದೆ: ಶಿವಪೂರ ಗ್ರಾಮ ಇವರ ಅಣ್ಣ ನಾಗೇಶ್ (32) ರವರು ರಕ್ತದೊತ್ತಡ ಕಾಯಿಲೆ ಇದ್ದು, ಹಾಗೂ ವಿಪರೀತ ಮದ್ಯಪಾನ ಮಾಡುವ ಚಟ ಹೋಂದಿದ್ದು ಅವರು ತಮಗೆ ಇರುವ ಕಾಯಿಲೆ ಹಾಗೂ ಕುಡಿತದ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ಮನನೊಂದು ಶುಕ್ರವಾರ ರಾತ್ರಿ ಮನೆಯ ಸಮೀಪದ ಹಾಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಕುರಿತು ಪ್ರಕರಣ ದಾಖಲಾಗಿದೆ.




