Share this news

ಕಾರ್ಕಳ, ಸೆ.08: ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು. ಬಿಜೆಪಿ ಮಂಡಲಾಧ್ಯಕ್ಷ ನವೀನ್ ನಾಯಕ್ ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ,ಸಾಮಾಜಿಕ ಸುಧಾರಕ, ತತ್ವಜ್ಞಾನಿ ಹಾಗೂ ಧಾರ್ಮಿಕ ನಾಯಕರೆಂದು ಪ್ರಸಿದ್ಧರಾದ ಶ್ರೀ ನಾರಾಯಣ ಗುರುಗಳು, ವರ್ಣ ವ್ಯವಸ್ಥೆಯಿಂದ ಉಂಟಾದ ಅಸಮಾನತೆಗಳನ್ನು ವಿರೋಧಿಸಿ, ಹಿಂದುಳಿದ ಸಮುದಾಯಗಳ ಉದ್ಧಾರಕ್ಕಾಗಿ ಅವರು ಶ್ರಮಿಸಿದರು. “ಒಂದು ಜಾತಿ, ಒಂದು ಧರ್ಮ, ಒಂದು ದೇವರು ಎಲ್ಲರಿಗೂ” ಮಾನವೀಯ ಏಕತೆ ಹಾಗೂ ಸಾಮರಸ್ಯದ ಸಂದೇಶವನ್ನು ಸಾರಿದ್ದರು. ಅವರು ಎಲ್ಲರಿಗೂ ಪ್ರವೇಶಿಸಬಹುದಾದ ದೇವಾಲಯಗಳನ್ನು ಸ್ಥಾಪಿಸಿದರು ಹಾಗೂ ಶಿಕ್ಷಣದ ಮೂಲಕ ಸಮುದಾಯದ ಶಕ್ತಿಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸಿದರು. ಅವರ ಸೇವೆ ಇಂದು ಕೂಡ ಸಾಮಾಜಿಕ ನ್ಯಾಯದ ಚಳವಳಿಗಳಿಗೆ ಮಾರ್ಗದರ್ಶಿಯಾಗಿದೆ ಎಂದರು.

ಈ ಸಂದರ್ಭದಲ್ಲಿಉಪಾಧ್ಯಕ್ಷ ಅನಂತಕೃಷ್ಣ ಶೆಣೈ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಪ್ರಸಾದ್ ಐಸಿರ, ನಿರಂಜನ್ ಜೈನ್, ಪ್ರಶಾಂತ್ ಕೋಟ್ಯಾನ್, ಅಶೋಕ್ ಸುವರ್ಣ, ರಾಮಚಂದ್ರ ನಾಯಕ್, ರವೀಂದ್ರ ಮೊಯಿಲಿ, ಪ್ರಕಾಶ್ ರಾವ್, ಸುರೇಶ್ ಕಾಬೆಟ್ಟು, ಭಾರತಿ ಅಮೀನ್, ಮೀನಾಕ್ಷಿ ಗಂಗಾಧರ್, ನಗರ ಮಹಿಳಾ ಮೋರ್ಚಾದ ಅಧ್ಯಕ್ಷರು ಮತ್ತಿತರ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *