Share this news

ಅಲಹಾಬಾದ್: ಮಥುರಾ ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಪ್ರಕರಣದಲ್ಲಿ ಈ ಪ್ರಕರಣಕ್ಕೆ ಸಂಬAಧಿಸಿದAತೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಬೇಕು ಎಂಬ ಮುಸ್ಲಿಂ ಪರ ಬೇಡಿಕೆಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.

ಮಥುರಾದಲ್ಲಿ ನಡೆಯುತ್ತಿರುವ ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದ ಪ್ರಕರಣದಲ್ಲಿ ಮುಸ್ಲಿಂ ಪರ ಗುಂಪು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದ್ದು, ಅರ್ಜಿದಾರರಿಗೆ ಭಾರೀ ಹಿನ್ನಡೆಯಾಗಿದೆ. ಈ ವಿವಾದಕ್ಕೆ ಸಂಬಂಧಿಸಿದ 15 ಅರ್ಜಿಗಳ ಕುರಿತು ಜನವರಿ 11ರ ಹೈಕೋರ್ಟ್ನ ಆದೇಶವನ್ನು ಮರುಪರಿಶೀಲಿಸುವ ಮನವಿಯು ಪ್ರಶ್ನಿಸಲಾಗಿತ್ತು.
ಅಕ್ಟೋಬರ್ 16ರಂದು ನ್ಯಾಯಾಲಯವು ಈ ವಿಷಯದ ಬಗ್ಗೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರ ಏಕ ಪೀಠವು ತೀರ್ಪು ನೀಡಿತು. ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಬಹು ಅರ್ಜಿಗಳನ್ನು ಒಂದಾಗಿ ಸಂಯೋಜಿಸಿದ ಜನವರಿ 11ರ ಆದೇಶದ ಮರುಸ್ಥಾಪನೆಗೆ ಮುಸ್ಲಿಂ ಕಡೆಯವರು ಪ್ರಯತ್ನಿಸಿದ್ದರು.

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಿಗೆ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ವಿವಾದಿತ ಭೂಮಿಗೆ ಸಂಬAಧಿಸಿದ ಎಲ್ಲಾ ಪ್ರಕರಣಗಳಿಗೆ ಏಕೀಕೃತ ಕಾನೂನು ಪ್ರಕ್ರಿಯೆಗೆ ಅವಕಾಶ ನೀಡುವ ಮೂಲಕ ಜನವರಿಯ ಆದೇಶವು ಯಥಾಸ್ಥಿತಿಯಲ್ಲಿ ಉಳಿಯುತ್ತದೆ ಎಂದು ಹೈಕೋರ್ಟ್ನ ತೀರ್ಪು ಖಚಿತಪಡಿಸಿದೆ.

 

 

Leave a Reply

Your email address will not be published. Required fields are marked *