Share this news

ಕಾರ್ಕಳ, ಮಾ6: ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಸಾಲಿನ ಬಜೆಟ್ ನಲ್ಲಿ ಬುಡಕಟ್ಟು ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎದು ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು ಆರೋಪಿಸಿದ್ದಾರೆ.

ಅರಣ್ಯ ಹಾಗೂ ಅರಣ್ಯದಂಚಿನಲ್ಲಿರುವ ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಅರಣ್ಯಾಧಾರಿತ ಬುಡಕಟ್ಟು, ದುರ್ಬಲ ಬುಡಕಟ್ಟು ಸಮುದಾಯದ ವಿದ್ಯಾವಂತರಿಗೆ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ, ಮನೆ ನಿರ್ಮಾಣಕ್ಕೆ 4. 50 ಲಕ್ಷ ರೂ ನೀಡುವುದಾಗಿಯೂ ಹಾಗೂ ಇತರ ಅಭಿವೃದ್ಧಿ ಕುರಿತಾಗಿ ಹಿಂದಿನ ಬಜೆಟ್ ನಲ್ಲಿ ಘೋಷಣೆಯಾಗಿದ್ದರೂ ಅದು ಈವರೆಗೂ ಕಾರ್ಯಗತವಾಗಿಲ್ಲ. ಇದೀಗ ಮತ್ತೆ ಅದನ್ನೇ ಇಂದಿನ ಬಜೆಟ್ ನಲ್ಲಿ ಘೋಷಿಸಲಾಗಿದೆ. ಜೊತೆಗೆ ಪರಿಶಿಷ್ಟ ಪಂಗಡದ ಜನರ ಹಕ್ಕುಗಳ ರಕ್ಷಣೆಗೆ ಅವರ ಸಮಸ್ಯೆ ಹಾಗೂ ದೂರುಗಳನ್ನು ಸ್ವೀಕರಿಸಲು ಪ್ರತ್ಯೇಕ ಪರಿಶಿಷ್ಟ ಪಂಗಡಗಳ ಆಯೋಗವನ್ನು ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಲಾಗಿದೆ. ಇಂದಿನ ಬಜೆಟ್ ನಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ ಒತ್ತು ಕೊಡಬೇಕಿತ್ತು. ಕೇವಲ ಬಜೆಟ್ ನಲ್ಲಿ ಘೋಷಣೆ ಮಾಡಿದರೆ ಸಾಲದು ಅದಕ್ಕೆ ಅನುದಾನ ತೆಗೆದಿರಿಸಿ ನಿಗದಿತ ಅವಧಿಯೊಳಗೆ ಕಾರ್ಯಗತವಾಗಬೇಕು, ಇಲ್ಲವಾದಲ್ಲಿ ಇದು ಕೇವಲ ಪೊಳ್ಳು ಭರವಸೆಯ ಬಜೆಟ್ ಆಗಲಿದೆ ಎಂದು ಶ್ರೀಧರ್ ಗೌಡ ಟೀಕಿಸಿದ್ದಾರೆ.

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *