ಕಾರ್ಕಳ: ಭಯೋತ್ಪಾದಕ ದಾಳಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಟೋಪಿ ಹಾಕಿದ್ದಾರೆ, ಪಾಕ್ ವಿರುದ್ಧ ಯುದ್ಧ ಬೇಡ ಎಂದು ಬದ್ಧ ವೈರಿ ರಾಷ್ಟ್ರ ಪಾಕಿಸ್ತಾನದ ಪರ ವಕಾಲತ್ತು ವಹಿಸಿರುವ ಸಿಎಂ ಸಿದ್ಧರಾಮಯ್ಯ ಟೋಪಿ ಹಾಕಿದವರ ಓಲೈಕೆಗೆ ಮುಂದಾಗಿರುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಮಾಜಿ ಸಚಿವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಟೀಕಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿದ ಅವರು,ದೇಶದ ಭದ್ರತೆಯ ವಿಚಾರದಲ್ಲೂ ನೀವು ಮಾಡುತ್ತಿರುವ ಈ ಕ್ಷುಲಕ ರಾಜಕಾರಣವನ್ನು ಒಪ್ಪುವುದಕ್ಕೇ ಸಾಧ್ಯವಿಲ್ಲ.ಈಗ ಯಾವುದೇ ಕ್ರಮ ಕೈಗೊಂಡರೂ ಭಯೋತ್ಪಾದಕ ದಾಳಿಗೆ ಬಲಿಯಾದ 24 ಜನ ವಾಪಾಸ್ ಬರ್ತಾರಾ ಎಂಬ ನಿಮ್ಮ ಪ್ರಶ್ನೆ ಮೂರ್ಖತನದ ಪರಮಾವಧಿ.ಅನ್ಯಾಯವಾಗಿ ಹೋದ ಪ್ರಾಣ ವಾಪಾಸ್ ಬರತ್ತಾ ಎನ್ನುವುದಕ್ಕೆ ಅದೇನು ಮುಡಾ ನಿವೇಶನವೇ ಎಂದು ಸುನಿಲ್ ಕುಮಾರ್ ಸಿಎಂ ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.