ಬೆಳ್ತಂಗಡಿ,ಆ, 6: ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣದ ಕುರಿತು ಅನಾಮಧೆಯ ದೂರುದಾರನ ಮಾಹಿತಿ ಮೇರೆಗೆ ಎಸ್‌ಐಟಿ ತಂಡ ಅಸ್ಥಿಪಂಜರಕ್ಕಾಗಿ ನಿರಂತರ ಶೋಧಕಾರ್ಯ ನಡೆಸುತ್ತಿರುವ ಬೆನ್ನಲ್ಲೇ ಇದೀಗ ಟಿ.ಜಯಂತ್ ಎಂಬವರು ಬಾಲಕಿಯ ಶವ ಹೂತಿರುವ ಕುರಿತು ಮಾಹಿತಿ ನೀಡುವುದಾಗಿ ಎಸ್‌ಐಟಿ ತಿಳಿಸಿದ ಹಿನ್ನಲೆಯಲ್ಲಿ ಎಸ್‌ಐಟಿ ತಂಡವು ಆತನ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದೆ. ಈ ಬೆಳವಣಿಗೆಯ ನಡುವೆ ಇದೀಗ ದೂರುದಾರನ ಪರವಾಗಿ ಸ್ಥಳೀಯ 6 ಜನರು ಇದೀಗ ಎಸ್‌ಐಟಿ ಮುಂದೆ ಹಾಜರಾಗಿದ್ದಾರೆ ಎನ್ನಲಾಗಿದ್ದು, ಈ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದೆ.
ಸ್ಥಳೀಯ 6 ಜನರು ಬಾಲಕಿಯ ಶವ ಹೂತಿರುವುದನ್ನು ನೋಡಿದ್ದಾಗಿ ಸಾಕ್ಷಿ ಹೇಳಲು ಇದೀಗ ಎಸ್‌ಐಟಿ ಅಧಿಕಾರಿಗಳ ಮುಂದೆ ಬಂದಿದ್ದಾರೆ. ಶೋಧ ಕಾರ್ಯಕ್ಕೆ ಸಹಾಯ ಮಾಡುತ್ತೇವೆ ಎನ್ನಲಾಗಿದ್ದು, ಈ ಕುರಿತು ಎಸ್‌ಐಟಿ ಅಧಿಕಾರಿಗಳು ಇನ್ನೂ ಕೂಡ ಖಚಿತಪಡಿಸಿಲ್ಲ. ಆರು ಜನರ ಹೇಳಿಕೆ ಸತ್ಯಾಸತ್ಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಅಧಿಕಾರಿಗಳು ಯಾವ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ.