Share this news

ಕಾರ್ಕಳ, ಏ,02: ಕಾರ್ಕಳದ ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ಏಪ್ರಿಲ್ 05, ಶುಕ್ರವಾರ ಚರ್ಮ ರೋಗದ ಕುರಿತು ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರವು ಬೆಳಿಗ್ಗೆ 9:30ರಿಂದ ಸಂಜೆ 05:00ರವರೆಗೆ ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಚರ್ಮ ರೋಗ ಚಿಕಿತ್ಸಾಲಯದಲ್ಲಿ ನಡೆಯಲಿದೆ.ಚರ್ಮ, ಕೂದಲು ಮತ್ತು ಉಗುರಿನ ಸಮಸ್ಯೆ ಉಳ್ಳವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಅವರು ತಿಳಿಸಿದ್ದಾರೆ.

ಮೊಡವೆಗಳು/ ಪಿಂಪಲ್ಸ್ ,ಪಿಗ್ಮೆಂಟೇಷನ್ ಮತ್ತು ನೆರಿಗೆ , ಬಿಳಿ ಕಲೆಗಳು , ಉರಿಗುಳ್ಳೆ ಮತ್ತು ಸನ್ ಬರ್ನ್ , ಕೂದಲು ಉದುರುವಿಕೆ , ಫಂಗಲ್ ಸೋಂಕು , ಚರ್ಮದಲ್ಲಿನ ಯಾವುದೇ ಭಾಗದಲ್ಲಿ ನಿರಂತರ ತುರಿಕೆ ಸೇರಿದಂತೆ ಎಲ್ಲಾ ರೀತಿಯ ಚರ್ಮ, ಕೂದಲು ಮತ್ತು ಉಗುರು ಸಂಬಂಧಿತ ಸಮಸ್ಯಗಳಿದ್ದವರು ಶಿಬಿರದಲ್ಲಿ ಭಾಗವಹಿಸಬಹುದು ಎಂದು ಚರ್ಮ ರೋಗ ತಜ್ಞೆ ಡಾ. ಅನುಷಾ ಡಿ ಸೋಜ ತಿಳಿಸಿದ್ದಾರೆ. ಸಮಾಲೋಚನೆ ಉಚಿತವಾಗಿದ್ದು ಔಷಧಿಗಳ ಮೇಲೆ ಶೇಕಡಾ 10 ರವರೆಗೆ ರಿಯಾಯಿತಿ ನೀಡಲಾಗುವುದು.ಮೊದಲು ನೋಂದಾಯಿಸಿದ 100 ಜನರಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿ ಮತ್ತು ನೋಂದಾವಣೆಗೆ ದೂರವಾಣಿ ಸಂಖ್ಯೆ: 9731601150 ಅಥವಾ 08258 230583.ಸಂಪರ್ಕಿಸಲು ಕೋರಲಾಗಿದೆ.

 

 

Leave a Reply

Your email address will not be published. Required fields are marked *