ಮಂಗಳೂರು: ಈಗಾಗಲೇ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು ಮಳೆಯ ಜತೆ ಸಿಡಿಲಿನ ಅಬ್ಬರವೂ ಕೂಡ ಜೋರಾಗಿದೆ.
ಇತ್ತೀಚಿನ ದಿನಗಳಲ್ಲಿ ಸಿಡಿಲಿನಿಂದ ಸಾಕಷ್ಟು ಜನ,ಜಾನುವಾರುಗಳು ಮೃತಪಟ್ಟಿರುವ ಪ್ರಕರಣಗಳು ನಡೆದಿದ್ದು,ಈ ಹಿನ್ನೆಲೆಯಲ್ಲಿ ಅನಾಹುತವನ್ನು ತಪ್ಪಿಸುವ ಸಲುವಾಗಿ ಕರಾವಳಿಗರು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುವುದನ್ನು ರಾಷ್ಟಿಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕರಾವಳಿಯ ಜನರಿಗೆ ಕೆಲವೊಂದು ಮುನ್ನೆಚ್ಚರಿಕೆ ನೀಡಿದೆ.
ಮಳೆ ಸಂದರ್ಭದಲ್ಲಿ ಸಿಡಿನಲಿನ ಆರ್ಭಟ ಜೋರಾಗಿದ್ದರೆ ಕೃಷಿಕೆಲಸ, ಜಾನುವಾರುಗಳನ್ನು ಮೇಯಿಸುವುದು,ಮೀನುಗಾರಿಕೆ, ಹೊಳೆಯಲ್ಲಿ ಈಜಾಡುವುದು, ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗದೇ ಆದಷ್ಟು ಮನೆಯಲ್ಲೇ ಇದ್ದರೆ ಉತ್ತಮ ಎಂದು ವಿಪತ್ತು ಪ್ರಾಧಿಕಾರ ಸಲಹೆ ನೀಡಿದೆ.
ಇದಲ್ಲದೇ ಸಿಡಿಲಿನ ಸಂದರ್ಭದಲ್ಲಿ ಆದಷ್ಟು ಕಬ್ಬಿಣ ಅಥವಾ ಲೋಹದ ವಸ್ತುಗಳನ್ನು, ಮೊಬೈಲ್ ಫೋನ್ ಗಳನ್ನು ಬಳಸಬಾರದು,ಇವುಗಳ ಸಿಡಿಲನ್ನು ಆಕರ್ಷಿಸುವ ಸಾದ್ಯತೆ ಹೆಚ್ಚಿರುತ್ತದೆ. ವಾಹನಗಳಲ್ಲಿ ಓಡಾಡುವ ಸಂದರ್ಭದಲ್ಲಿ ವಾಹನಗಳನ್ನು ತೆರೆದ ಪ್ರದೇಶದಲ್ಲಿ ನಿಲ್ಲಿಸಬೇಕು ಯಾವುದೇ ಕಾರಣಕ್ಕೂ ಮರ ಅಥವಾ ವಿದ್ಯುತ್ ಲೈನ್ ಪಕ್ಕದಲ್ಲಿ ನಿಲ್ಲಿಸಬಾರದು, ಹೊರಗಡೆ ಬಯಲಿನಲ್ಲಿ ಕೆಲಸ ಮಾಡುವವರು ಸಿಡಿಲಿನ ಸಂದರ್ಭದಲ್ಲಿ ಎತ್ತರದ ಮರಗಳು ಹಾಗೂ ಎತ್ತರವಾದ ಗುಡ್ಡಪ್ರದೇಶಗಳಲ್ಲಿ ಆಸರೆ ಪಡೆಯಬಾರದು,ಬದಲಿಗೆ ಆದಷ್ಟು ಸಣ್ಣಪುಟ್ಟ ಮರ ಅಥವಾ ತಗ್ಗು ಪ್ರದೇಶಗಳಲ್ಲಿ ಆಸರೆ ಪಡೆಯಬೇಕು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ