ಹೆಬ್ರಿ: ಕಾರು ಮತ್ತು ಪಿಕಪ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ನಿಗಾ ಬೇಮಗ್ ರವರು ಭಾನುವಾರ ಅಲ್ಟೋ ಕಾರಿನಲ್ಲಿ ಚಾಲಕ ಶರೀಫ್, ಮಕ್ಕಳಾದ ಮೊಹಮ್ಮದ್ ನಿಹಾಲ್(14) ,ನಿಫಾ ಅಂಜು(7), ಬಾವನ ಮಗ ಸರಾನ್.ಎಂ.ಎಸ್ (17) ಮತ್ತು ಅರವಿಂದ.ಜಿ ರವರೊಂದಿಗೆ ತೀರ್ಥಹಳ್ಳಿಯಿಂದ ಕಾರ್ಕಳಕ್ಕೆ ಹೋಗುತ್ತಿರುವಾಗ ಮಧ್ಯಾಹ್ನ 12:40ರ ವೇಳೆಗೆ ಸೊಮೇಶ್ವರ ಕಡೆಯಿಂದ ಬರುವ 2ನೇ ತಿರುವು ತಲುಪುವಾಗ ಸೊಮೇಶ್ವರ ಕಡೆಯಿಂದ ಆಗುಂಬೆ ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನವನ್ನು ಅದರ ಚಾಲಕ ದಾವೂದ್ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ನಿಗಾ ಬೇಗಮ್ ಪ್ರಯಾಣಿಸುತ್ತಿದ್ದ ಕಾರಿಗೆ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಿಹಾಲ್, ಸರಾನ್.ಎಂ.ಎಸ್ ಹಾಗೂ ಚಾಲಕ ಶರೀಫ್ ಗಾಯಗೊಂಡಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














