ಕಾರ್ಕಳ : ಇಂದು ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಡಿಮೆಯಾಗುತ್ತಿದೆ.ಕೇವಲ ಗೆಲುವಿಗಾಗಿ ಭಾಗವಹಿಸುವಿಕೆಯ ಬದಲು ಸಮಾನತೆ, ಸೌಹಾರ್ದತೆ, ಸೋಲಿನ ಪಾಠದಿಂದಾಗಿ ಗೆಲುವಿನ ಕಡೆಗೆ ಗಮನಹರಿಸಲು ಕ್ರೀಡಾಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ಕೈಗಾರಿಕೋದ್ಯಮಿ ಚೇತನ್ ಕೋಟ್ಯಾನ್ ಅಭಿಪ್ರಾಯಪಟ್ಟರು.
ಅವರು ಕಾಲೇಜುಮಟ್ಟದ ಭುವನೇಂದ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಎರಡನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿ,
ಇವುಗಳೆಲ್ಲ ಕ್ರೀಡೆಯಲ್ಲಿ ಪಾಲುಪಡೆದಾಗ ಸಿಗುವ ಜೀವನ ಪಾಠಗಳು, ಅವುಗಳನ್ನು ಅರ್ಥಮಾಡಿಕೊಂಡರೆ ನಾಯಕತ್ವ ಗುಣದ ಬೆಳವಣಿಗೆ ಹಾಗೂ ಒಳ್ಳೆಯ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಮೈದಾನದಲ್ಲಿ ಕ್ರಿಕೆಟ್ ಆಡುವುದು ಒಂದಾದರೆ ಆಟವನ್ನು ನೋಡುವುದೂ ಜೀವನಕ್ಕೆ ಪಾಠವಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಾದರೂ ಭಾಗವಹಿಸಿದರೆ ಜೀವನದಲ್ಲಿ ಸಮೃದ್ಧಿ, ಯಶಸ್ಸು ಸರಾಗವಾಗಿ ಒಲಿದು ಬರುತ್ತದೆ ಎಂಬುದಾಗಿ ಕಾಲೇಜಿನ ಹಳೆ ವಿದ್ಯಾರ್ಥಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ.ಕೋಟ್ಯಾನ್ ವಹಿಸಿ ಕಾಲೇಜು ಕ್ರೀಡೆ, ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಿಗೆ ವಿಪುಲ ಅವಕಾಶವನ್ನು ನೀಡುತ್ತದೆ. ವಿದ್ಯಾರ್ಥಿಗಳು ಅವುಗಳ ಸಂಪೂರ್ಣ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಹೇಳಿದರು. ಹಳೆ ವಿದ್ಯಾರ್ಥಿಗಳು ಕಾಲೇಜಿನ ಯಾವುದೇ ಚಟುವಟಿಕೆಗಳಿಗೆ
ಬೆನ್ನುಲುಬಾಗಿ ನಿಲ್ಲುವುದು ಸಂತಸದ ಸಂಗತಿ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಕಳದ ಪ್ರತಿಷ್ಠಿತ ಬಿಆರ್‌ಕೆ
ಸಮೂಹ ಕೈಗಾರಿಕೋದ್ಯಮಿ ನಾಗರಾಜ ಕಾಮತ್, ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷ ಹರ್ಷ ಕೆ. ಶೆಟ್ಟಿ ಯವರು ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ದತ್ತಾತ್ರೇಯ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಅರುಣಕುಮಾರ ಎಸ್. ಆರ್ ಅವರು ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್ ಚಂದ್ರ ಅವರು ಸ್ವಾಗತಿಸಿ, ಕಾಲೇಜಿನ ವ್ಯವಹಾರ ಅಧ್ಯಯನ
ವಿಭಾಗದ ಮುಖ್ಯಸ್ಥರಾದ ನಂದಕಿಶೋರ್ ವಂದಿಸಿದರು. ವಿದ್ಯಾರ್ಥಿ ಗಣೇಶ್ ಬಿ.ಸಿ. ಕಾರ್ಯಕ್ರಮ ನಿರೂಪಿಸಿದರು.










