

ಕಾರ್ಕಳ ಸೆ. 09: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ಇದರ ರಾಜ್ಯಮಟ್ಟದ ಸಮಾವೇಶವು ಸೆ 12 ಹಾಗೂ 13 ರಂದು ದಾವಣಗೆರೆಯ ಎಸ್. ಎಸ್. ಮಲ್ಲಿಕಾರ್ಜುನ ಕಲ್ಚರಲ್ ಸೆಂಟರ್ ನಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಂಡು ಇದೀಗ ರಾಜ್ಯವ್ಯಾಪಿ ತನ್ನ ಸದಸ್ಯತ್ವವನ್ನು ವಿಸ್ತರಿಸಿಕೊಂಡಿರುವ ಕುಪ್ಮಾ ಸಂಸ್ಥೆಯು ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಮಾರ್ಪಾಡುಗಳು ಮತ್ತು ಬದಲಾವಣೆಗಳನ್ನು ಸರಕಾರದೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಅಂತೆಯೇ ಬೇರೆ ಬೇರೆ ಕಾಲೇಜುಗಳ ಸಾರ್ವತ್ರಿಕ ಸಮಸ್ಯೆಗಳು ಎದುರಾದಾಗಕುಪ್ಮಾವು ಸರಕಾರದೊಂದಿಗೆಆರೋಗ್ಯಕರವಾದಚರ್ಚೆ, ಸಲಹೆ, ಸೂಚನೆಗಳೊಂದಿಗೆ ಆ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವೀಯಾಗಿದೆ.
ಈ ಸಮಾವೇಶದಲ್ಲಿ ನಮ್ಮ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳು ಭಾಗವಹಿಸಬೇಕಾಗಿ ಕುಪ್ಮಾ ಈ ಮೂಲಕ ವಿನಂತಿಸಿಕೊಂಡಿದೆ.


