Share this news

ಕಾರ್ಕಳ:  ಅಡಿಕೆ ಬೆಳೆಗೆ ಇತ್ತೀಚಿನ ವರ್ಷಗಳಲ್ಲಿ ಭಾಧಿಸುತ್ತಿರುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಪೋಷಕಾಂಶಗಳ ನಿರ್ವಹಣೆ, ಸ್ವಚ್ಛತೆ ನಿರ್ವಹಣೆಗಳೊಂದಿಗೆ ಶಿಫಾರಸ್ಸು ಮಾಡಿದ ರಾಸಾಯನಿಕಗಳ ಸಿಂಪರಣೆಯು ಸಹ ಒಂದು ಕ್ರಮವಾಗಿದ್ದು, ರೈತರು ತಮ್ಮ ಅಡಿಕೆ ತೋಟಗಳಲ್ಲಿ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಶಿಫಾರಸ್ಸು ಮಾಡಲಾದ ರಾಸಾಯನಿಕ ಔಷಧಿಗಳನ್ನು (ಪ್ರೊಪಿಕೋನೋಜಾಲ್, ಟೆಬೋಕೋನೋಜಾಲ್, ಪ್ರೋಪಿನೆಬ್ ಹಾಗೂ ಇತರೇ) ಖರೀದಿಸಿದ್ದಲ್ಲಿ/ಖರೀದಿಸಿದಲ್ಲಿ ಸಹಾಯಧನಕ್ಕಾಗಿ ತೋಟಗಾರಿಕೆ ಇಲಾಖೆಗೆ ಅರ್ಜಿಯನ್ನು ಸಲ್ಲಿಸಬಹುದು.

ತೋಟಗಾರಿಕೆ ಇಲಾಖೆ ವತಿಯಿಂದ ಪ್ರತಿ ಎಕರೆಗೆ ರೂ. 600/- ಗಳಂತೆ ಗರಿಷ್ಠ 5 ಎಕರೆಗಳಿಗೆ ಸಹಾಯಧನ ನೀಡಿಕೆಗೆ ಅವಕಾಶವಿದ್ದು, ರೈತರು ಪಹಣಿ ಪ್ರತಿ, ಆಧಾರ್‍ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಅಧಿಕೃತ ಮಾರಾಟಗಾರರಿಂದ ರಾಸಾಯನಿಕ ಖರೀದಿಸಿದ ಬಿಲ್ಲುಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಸಹಾಯಧನವು ಎಪ್ರಿಲ್-2025ರ ನಂತರ ಖರೀದಿಸಲಾದ ರಾಸಾಯನಿಕಗಳಿಗೆ ಮಾತ್ರ ದೊರೆಯಲಿದೆ ಎಂದು  ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀನಿವಾಸ ಬಿ.ವಿ ತಿಳಿಸಿದ್ದಾರೆ.

2025-26ನೇ ಸಾಲಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ  ವಿವಿಧ ಯೋಜನೆಗಳಿಗೆ  ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. 
ಸೌರಶಕ್ತಿ ಆಧಾರಿತ ಕೃಷಿ ಪಂಪ್‍ ಸೆಟ್ ಆಳವಡಿಕೆಗೆ ಸಹಾಯಧನ: 
3HP, 2.00 ಲಕ್ಷ1.00 ಲಕ್ಷಕನಿಷ್ಠ ಅರ್ಧ ಎಕರೆ ಮೇಲ್ಪಟ್ಟು ಜಮೀನು ಹೊಂದಿರುವ ರೈತರು ಇಲಾಖೆಯಿಂದ ಎಂಪ್ಯಾನೆಲ್ ಆದ ಕಂಪನಿಗಳಿಂದ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ಇಲಾಖೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 5HP ಹಾಗೂ ಮೇಲ್ಪಟ್ಟು3.00 ಲಕ್ಷ1.50 ಲಕ್ಷ
ನೀರು ಸಂಗ್ರಹಣಾ ಘಟಕಕ್ಕೆ ಸಹಾಯಧನ:
2500 ಘ. ಮೀ 2.00 ಲಕ್ಷ 1.50 ಲಕ್ಷ ಕನಿಷ್ಠ 2.50 ಎಕರೆ ತೋಟಗಾರಿಕೆ ಬೆಳೆ ಹೊಂದಿರಬೇಕು, 4500 ಘ. ಮೀ 3.60 ಲಕ್ಷ 2.70 ಲಕ್ಷ ಕನಿಷ್ಠ 2.50 ಎಕರೆ ತೋಟಗಾರಿಕೆ ಬೆಳೆ ಹೊಂದಿರಬೇಕು ಹಾಗೂ  6500 ಘ.ಮೀ 3.90 ಲಕ್ಷ 3.90 ಲಕ್ಷ  ಕನಿಷ್ಠ 5.00 ಎಕರೆ ತೋಟಗಾರಿಕೆ ಬೆಳೆ ಹೊಂದಿರಬೇಕು.
9000 ಘ.ಮೀ7.20 ಲಕ್ಷ5.40 ಲಕ್ಷಕನಿಷ್ಠ 10.00 ಎಕರೆ ತೋಟಗಾರಿಕೆ ಬೆಳೆ ಹೊಂದಿರಬೇಕು.ಇಲಾಖೆ ಅನುಮೋದಿತ ಪಾಲಿಥೀನ್ ಲೈನರ್ ಸರಬರಾಜುದಾರರಿಂದ 500 ಮೈಕ್ರಾನ್‍ ಪಾಲಿಥೀನ್ ಶೀಟ್ ಖರೀದಿಸಿ ಅಳವಡಿಸುವುದು. ಪಾಲಿಥೀನ್ ಲೈನಿಂಗ್ ಅಳವಡಿಸದೇ ಇದ್ದಲ್ಲಿ ಶೇ. 30 ಸಹಾಯಧನ ಕಡಿತಗೊಳಿಸಲಾಗುವುದು.
ತೋಟಗಾರಿಕೆಯಲ್ಲಿ ಕೊಯ್ಲೋತ್ತರ ನಿರ್ವಹಣೆಗೆ ಸಹಾಯಧನ:
1.ಸಂಸ್ಕರಣಾ ಘಟಕ  2.00 ಕೋಟಿ 50.00 ಲಕ್ಷ ಹೊಸದಾಗಿ ನಿರ್ಮಿಸಿದ ಸಂಸ್ಕರಣಾ ಘಟಕಗಳಿಗೆ ಸಹಾಯಧನ. ಹಣ್ಣು& ತರಕಾರಿ ಸಂಸ್ಕರಣೆ, ಹಣ್ಣಿನ ರಸ ಉತ್ಪಾದನೆ, ಕ್ಯಾನಿಂಗ್, ಉಪ್ಪಿನಕಾಯಿ ಘಟಕ, ಸುಗಂಧ ದ್ರವ್ಯ ಸಂಸ್ಕರಣೆ ಹಾಗೂ ಇತರೇ.
2.ಕ್ಷೇತ್ರ ಮಟ್ಟದಲ್ಲಿ ವಿಂಗಡನೆ , ಪ್ಯಾಕಿಂಗ್ & ಸಂಗ್ರಹಣಾ  ಘಟಕ2.00 ಲಕ್ಷ1.00 ಲಕ್ಷ8×5 ಮೀ ವಿಸ್ತೀರ್ಣದ 4 ಮೀ ಎತ್ತರದ ಕಟ್ಟಡ ರಚನೆ.
3.ತೆಂಗು ಶೇಖರಣಾ ಘಟಕ 1.75 ಲಕ್ಷ 0.875 ಲಕ್ಷ ಕನಿಷ್ಠ 1.00 ಹೆಕ್ಟೇರ್ ತೆಂಗು ಹೊಂದಿರುವ ರೈತರಿಗೆ 13.50 ಅಡಿ x 10 ಅಡಿ ವಿಸ್ತೀರ್ಣದ 13.50 ಅಡಿ ಎತ್ತರದ ರಚನೆ. 0.70 ಲಕ್ಷ 0.35 ಲಕ್ಷ ಕನಿಷ್ಠ 1 ಎಕರೆ ತೆಂಗು ಬೆಳೆ ಹೊಂದಿರುವ ರೈತರಿಗೆ 9x9x9 ಅಡಿ ರಚನೆ.
4.ಕಡಿಮೆ ವೆಚ್ಚದ ಹಣ್ಣು ಮಾಗಿಸುವ ಘಟಕ 6500.00 3250.00 1.60 ಮೀ x 1.40 ಮೀ x 1.80 ಮೀ ಅಳತೆಯ PVC ಪೈಪ್ ಹಾಗೂ ಪಾಲಿಥೀನ್ ಶೀಟ್ ಬಳಸಿ ಮಾಡಿದ ರಚನೆ.
ಆಸಕ್ತರು ಪಹಣಿ ಪ್ರತಿ, ಆಧಾರ್ ಪ್ರತಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಕಾರ್ಕಳ ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು  ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಶ್ರೀನಿವಾಸ ಬಿ.ವಿ ತಿಳಿಸಿದ್ದಾರೆ.
 

 

Leave a Reply

Your email address will not be published. Required fields are marked *