ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಕಂಟೇನರ್ ವಾಹನವೊಂದು ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪಲ್ಟಿಯಾಗಿದ್ದು, ಬಾರೀ ಅನಾಹುತ ತಪ್ಪಿದೆ.
ಮಂಡ್ಯದಿಂದ ತರಕಾರಿ, ಹಣ್ಣು-ಹಂಪಲು ಸಾಗಾಟ ನಡೆಸುವ ಕಂಟೇನರ್ ಸುಳ್ಯ ನಗರದ ಪೊಲೀಸ್ ಠಾಣಾ ಬಳಿಯ ಫುಟ್‌ಪಾತ್‌ನ ತಡೆಬೇಲಿಗೆ ಗುದ್ದಿ, ಅದರ ಬಳಿಯ ಪ್ಲವರ್ ಸ್ಟಾಲ್‌ನ ಮುಂಭಾಗದ ಟೆಂಟ್‌ಗೂ ಗುದ್ದಿ, ಎಲ್‌ಡಿ ಬ್ಯಾಂಕ್‌ನ ಮುಂಭಾಗದ ಕಂಪೌಂಡ್, ನಂದಿನಿ ಸ್ಟಾಲ್‌ಗೆ ಗುದ್ದಿ ಮಾ.6ರಂದು ಮುಂಜಾನೆ ಪಲ್ಟಿಯಾಗಿದೆ.
ಈ ಸಂದರ್ಭ ಘಟನಾ ಸ್ಥಳದಲ್ಲಿದ್ದ ಸ್ಕೂಟರ್‌ವೊಂದು ಕಂಟೇನರ್‌ನಡಿಗೆ ಸಿಲುಕಿ ಜಖಂಗೊಂಡಿದೆ. ಘಟನಾ ಸ್ಥಳದಲ್ಲಿ ದಿನನಿತ್ಯ ಹಲವಾರು ಮಂದಿ ಕಾರ್ಮಿಕರು, ಪ್ರಯಾಣಿಕರು ನಿಂತಿರುತ್ತಾರೆ, ಆದರೆ ಅದೃಷ್ಟವಶಾತ್ ಘಟನೆ ಸಮಯ ಯಾರೂ ಇಲ್ಲದ ಪರಿಣಾಮ ಬಾರೀ ಅನಾಹುತ ತಪ್ಪಿದಂತಾಗಿದೆ. ಬಳಿಕ ಕ್ರೇನ್ ಬಳಸಿ ಕಂಟೇನರ್‌ನ್ನು ಮೇಲಕೆತ್ತಲಾಯಿತು. ಕಂಟೇನರ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

K