
ಹೆಬ್ರಿ,ಜ.29: ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮದ ಪ್ರಯುಕ್ತ ಬುಧವಾರ ಭವ್ಯವಾದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ವಿದ್ವಾನ್ ನಾರಾವಿ ಗುರುರಾಜ್ ಭಟ್ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಬದಲ್ಲಿ ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ, ಗೌರವಾಧ್ಯಕ್ಷ ಸದಾಶಿವ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಪುತ್ತಿ, ಪ್ರಮುಖರಾದ ವರಂಗ ರಾಮಚಂದ್ರ ಭಟ್, ಸುಭಾಶ್ಚಂದ್ರ ನಾಯ್ಕ್ , ಊರಿನ ಪ್ರಮುಖರು, ಗಣ್ಯರು, ಭಜನಾ ಮಂಡಳಿಯ ಸದಸ್ಯರು ಸೇರಿದಂತೆ ಹಲವಾರು ಮಂದಿ ಭಾಗಿಯಾದರು.
ದೀಪ ಬೆಳಗಿಸುವುದರ ಮೂಲಕ ಧರ್ಮಸ್ಥಳ ವಾದಿರಾಜ ಶಬರಾಯ ಉಗ್ರಾಣ ಮುಹೂರ್ತ ನೆರವೇರಿಸಿದರು. ಸಾಲಿಗ್ರಾಮ ಉಗ್ರನರಸಿಂಹ ದೇವಸ್ಥಾನದ ಅರ್ಚಕ ಮಿಥುನ್ ಅಡಿಗ ಇದ್ದರು.
ಸೂರಿಮಣ್ಣು ಮಠದ ವಿದ್ವಾನ್ ರವಿರಾಜ್ ಉಪಾಧ್ಯಾಯ ಸ್ವಾಗತಿಸಿ ವಂದಿಸಿದರು.

.
.
.
.
