Share this news

 

ಕಾರ್ಕಳ: ಗೆಲುವಿಗಾಗಿ ಆಡಿದವ ಸೋಲುತ್ತಾನೆ. ಉತ್ತಮ ಪ್ರದರ್ಶನ ನೀಡುವೆನೆಂದವ ಗೆಲ್ಲುತ್ತಾನೆ. ಕ್ರೀಡೆಯು ವ್ಯಕ್ತಿಯ ವಿಕಾಸದಲ್ಲಿ ಮಹತ್ವದ ಪಾತ್ರವಹಿಸುತ್ತಿದೆ ಎಂದು ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆಯ ಎಸ್.ಐ ಶ್ರೀ ಪ್ರಸನ್ನ ಎಂ. ಎಸ್ ಹೇಳಿದರು. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಗಣಿತನಗರದಲ್ಲಿ ಜಂಟಿಯಾಗಿ ಆಯೋಜಿಸಿದ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪಂದ್ಯಾಟವನ್ನು ಉದ್ಘಾಟಿಸಿದ, ಕೌನ್ಸಿಲರ್-ಸೈಕೋಲಜಿಸ್ಟ್ ಡಾ.ಪ್ರಸನ್ನ ಹೆಗ್ಡೆ ಮಾತನಾಡಿ, ಸೋಲು ಗೆಲುವಿನ ಸಮನ್ವಯತೆಯ ಭಾವನೆ ಕ್ರೀಡೆಯಲ್ಲಿ ಮಾತ್ರ ಇರಲು ಸಾಧ್ಯ. ಕ್ರೀಡಾಸ್ಫೂರ್ತಿ ಹೊಂದಿದವರು ಒತ್ತಡ ರಹಿತ ಬದುಕನ್ನು ಹೊಂದಿರುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್ ವಹಿಸಿದ್ದರು.
ವೇದಿಕೆಯಲ್ಲಿ ತಾಲೂಕು ಕ್ರೀಡಾ ಸಂಯೋಜಕರು ಶರತ್ ರಾವ್, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಉಪಸ್ಥಿತರಿದ್ದರು.
ರಸಾಯನ ಶಾಸ್ತç ವಿಭಾಗದ ಮುಖ್ಯಸ್ಥ ಡಾ.ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಪಿ.ಆರ್.ಒ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ ಸ್ವಾಗತಿಸಿ, ದೈ.ಶಿ.ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ ವಂದಿಸಿದರು.

ಸಮಾರೋಪ ಸಮಾರಂಭ :
ಸಾಮಾಜಿಕ ಸ್ವಾಸ್ತö್ಯ, ಸಾಮಾಜಿಕ ಸಾಮರಸ್ಯಕ್ಕೆ ಹಾಗೂ ಎಲ್ಲರ ಬೆಸೆಯುತ ವಿಶ್ವಭಾವೈಕ್ಯತೆಗೆ ಕ್ರೀಡೆ ಕಾರಣಾವಾಗಿದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೀತರಾಮ್ ಭಟ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಗಣಿತನಗರದಲ್ಲಿ ಜಂಟಿಯಾಗಿ ಆಯೋಜಿಸಿದ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಣಿಪಾಲ್ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್, ದೈಹಿಕ ಶಿಕ್ಷಣ ನಿದೇರ್ಶಕರಾದ ಶ್ರೀ ಅರುಣ್, ಶ್ರೀಮತಿ ಸೌಜನ್ಯ ಹೆಗ್ಡೆ, ಶ್ರೀ ಕಿರಣ್ ಮತ್ತು ಶ್ರೀಮತಿ ರೇಷ್ಮಾ ಸಾಲಿಸ್ ಉಪಸ್ಥಿತರಿದ್ದರು.

ಫಲಿತಾಂಶ :
ಬಾಲಕಿಯರ ವಿಭಾಗ:
ಪ್ರಥಮ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ಗಣಿತನಗರ (ಅಲ್ ರೌಂಡರ್ : ಅಪೇಕ್ಷಾ ಎ ಭಗವತಿ, ಬೆಸ್ಟ್ಸರ್ವಿಸ್ : ಹರ್ಷಿತಾ ಎಚ್.ಎಸ್),
ದ್ವಿತೀಯ ಸ್ಥಾನ : ಎಸ್.ವಿ.ಟಿ. ಮಹಿಳಾ ಪದವಿ ಪೂರ್ವ ಕಾಲೇಜು, ಕಾರ್ಕಳ. (ಡಿಫೆಂಡರ್ – ಚೈತ್ರಾ),
ಬಾಲಕರ ವಿಭಾಗ:
ಪ್ರಥಮ : ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು, ಕಾರ್ಕಳ, (ಅಲ್‌ರೌಂಡರ್ ಅಬ್ರಹಾರ್, ಬೆಸ್ಟ್ ಸರ್ವಿಸ್ – ಅನೀಶ್)
ದ್ವಿತೀಯ : ಕೆ.ಎಂ.ಇ.ಎಸ್ ಪದವಿ ಪೂರ್ವ ಕಾಲೇಜು, ಕುಕ್ಕುಂದೂರು, (ಡಿಫೆಂಡರ್ – ರೋಹನ್)

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *