ಕಾರ್ಕಳ: ಕೆ. ಎಮ್. ಇ. ಎಸ್ ವಿದ್ಯಾಸಂಸ್ಥೆ ರಾಷ್ಟ್ರಮಟ್ಟದ ಕ್ರೀಡಾಳುಗಳನ್ನು ಕೊಟ್ಟ ಸಂಸ್ಥೆ. ಇಂಥಹ ಸಂಸ್ಥೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟನೆಗೊಳಿಸಲು ಹೆಮ್ಮೆಯಾಗುತ್ತದೆ. ವಿದ್ಯಾರ್ಥಿಗಳು ಆಟದಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಪ್ರಭಾಕರ ಜೈನ್ ಹೇಳಿದರು.
ಅವರು ಕೆ. ಎಮ್. ಇ. ಎಸ್ ವಿದ್ಯಾಸಂಸ್ಥೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ ಮೊಹಮ್ಮದ್ ಜಕ್ರಿಯಾರವರು ಮಾತನಾಡಿ, ಕೆ. ಎಮ್. ಇ .ಎಸ್. ವಿದ್ಯಾಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಸ್ಪೋರ್ಟ್ಸ್ ಕೋಟಾದಡಿಯಲ್ಲಿ ಹಲವಾರು ಉದ್ಯೋಗವನ್ನು ಪಡೆದಿರುತ್ತಾರೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಕೆ. ಬಾಲಕೃಷ್ಣ ರಾವ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆಗಸ್ಟ್ 29 ಮೇಜರ್ ಧ್ಯಾನ್ ಚಂದ್ ಕ್ರೀಡಾ ದಿಗ್ಗಜ ಅವರ ಜನ್ಮದಿನ, ಆ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸುತ್ತಾರೆ. ಪಂದ್ಯಾಟ, ಕ್ರೀಡೆಗಳು ಮಕ್ಕಳಿಗೆ ಮನೋರಂಜನೆ ಒಟ್ಟಿಗೆ ಮಾನಸಿಕ ಸ್ಥಿತಿಯನ್ನು, ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಮಯದ ನಿರ್ವಹಣೆ, ದೇಹದ ಸ್ನಾಯುಗಳ ಶಕ್ತಿಯ ವರ್ಧನೆ, ಏಕಾಗ್ರತೆ, ತಾಳ್ಮೆ, ಅನೇಕ ರೋಗಗಳ ನಿವಾರಣೆ, ದೇಹದಲ್ಲಿ ಸರಿಯಾದ ರಕ್ತ ಪರಿಚಲನೆ, ಇತ್ಯಾದಿ ಧನಾತ್ಮಕ ಚೈತನ್ಯಗಳನ್ನು ಉಂಟು ಮಾಡುತ್ತದೆ. ಗ್ರೀಕ್ ದೇಶದವರು ಕ್ರಿಡೆಗೆ ಹೆಚ್ಚು ಮಹತ್ವ ಕೊಡುತ್ತಿದ್ದರು. ಅಂದಿನಿAದ ಆರಂಭಗೊAಡ ಒಲಿಂಪಿಕ್ ಕ್ರೀಡೆ ಇಂದಿಗೂ ಜಗತ್ ಪ್ರಸಿದ್ಧವಾಗಿದೆ. ಕ್ರೀಡೆಗಳು ನಾಯಕತ್ವದ ಗುಣವನ್ನು ಉಂಟು ಮಾಡುತ್ತದೆ. ಧನಾತ್ಮಕ ಚಿಂತನೆಯ ಒಟ್ಟಿಗೆ ಪರಸ್ಪರ ಸಹಕಾರದಿಂದ ಬಾಳುವ ಸಾಮಾಜಿಕ ಪಾಠವನ್ನು ಕಲಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶ್ರೀಮತಿ ಪಾಟ್ಕರ್ , ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಲೋಲಿಟ ಡಿ ಸಿಲ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕಿ ದೀಕ್ಷಾರವರು ಸ್ವಾಗತಿಸಿ, ಉಪನ್ಯಾಸಕ ಗುರುಕುಮಾರ್ ವಂದಿಸಿದರು. ಉಪನ್ಯಾಸಕಿ ಪೂಜಾರವರು ಕಾರ್ಯಕ್ರಮ ನಿರ್ವಹಿಸಿದರು.