ಜಾರ್ಖಂಡ್: ಛತ್ತೀಸ್’ಗಡದ ಕೇಂದ್ರ-ಕೊರ್ಚೋಲಿಯ ಕಾಡಿನಲ್ಲಿ ಮಂಗಳವಾರ ಮುಂಜಾನೆ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ 07 ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸಿಆರ್’ಪಿಎಫ್, ಕೋಬ್ರಾ ಬೆಟಾಲಿಯನ್, ಜಿಲ್ಲಾ ರಿಸರ್ವ್ ಗಾರ್ಡ್ ಮತ್ತು ವಿಶೇಷ ಕಾರ್ಯಪಡೆಯ ಜಂಟಿ ತಂಡವು ಬಸ್ತಾರ್ ವಿಭಾಗದ ಬಿಜಾಪುರ ಜಿಲ್ಲೆಯ ಗಂಗಲೂರು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಗುಂಡಿನ ಚಕಮಕಿಯ ನಂತರ, ಭದ್ರತಾ ಸಿಬ್ಬಂದಿ ನಾಲ್ವರು ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ಲೈಟ್ ಮೆಷಿನ್ ಗನ್- ಎಲ್ಎಂಜಿ, ಬ್ಯಾರೆಲ್ ಗ್ರೆನೇಡ್ ಲಾಂಚರ್- ಬಿಜಿಎಲ್ ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಹ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.