ನವದೆಹಲಿ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಭೀಕರ ರೈಲು ದುರಂತವೊಂದು ಸಂಭವಿಸಿದ್ದು, ಘಟನೆಯಲ್ಲಿ 8ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸೀಲ್ದಾಹ್‌ಗೆ ಹೊರಟಿದ್ದ ಪ್ರಯಾಣಿಕ ರೈಲು ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ವರದಿಗಳ ಪ್ರಕಾರ ಅಪಘಾತದ ರಭಸಕ್ಕೆ ರೈಲಿನ ಎರಡು ಬೋಗಿಗಳು ಹಳಿಯಿಂದ ಕಳಚಿ ಬೇರೆಡೆ ಎಸೆಯಲ್ಪಟ್ಟಿವೆ. ಸೀಲ್ದಾಹ್‌ಗೆ ಹೊರಟಿದ್ದ ಕಂಚನ್‌ಜುಂಗ್ ಎಕ್ಸ್‌ಪ್ರೆಸ್ ರೈಲಿಗೆ ಇಂದು ಮುಂಜಾನೆ ನ್ಯೂ ಜಲಪೈಗುರಿ ಬಳಿ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ. 9 ಗಂಟೆ ವೇಳೆಗೆ ಘಟನೆ ನಡೆದಿದ್ದು, ಈ ಕಂಚನ್‌ಗುಂಜ್ ರೈಲು ತ್ರಿಪುರಾದ ಅಗರ್ತಲಾದಿಂದ ಹೊರಟಿದ್ದು ಸೀಲ್ದಾಹ್‌ನತ್ತ ಹೋಗುತ್ತಿತ್ತು. ಆದರೆ ನ್ಯೂ ಜಲಫೈಗುರಿ ರೈಲು ನಿಲ್ದಾಣಕ್ಕಿಂತ ಸ್ವಲ್ಪ ಹಿಂದೆ ರಂಗಪಾನಿ ಎಂಬಲ್ಲಿ ಈ ಅಪಘಾತ ಸಂಭವಿಸಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ರೈಲ್ವೆ ಅಪಘಾತ ದುಃಖಕರವಾಗಿದೆ.ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಅಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ಸಂತ್ರಸ್ತರಿಗೆ ಸಹಾಯ ಮಾಡಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಪಘಾತದ ಸ್ಥಳಕ್ಕೆ ತೆರಳುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.