ಬೆಂಗಳೂರು:ಕುಖ್ಯಾತ ಉಗ್ರ ಟಿ.ನಾಸಿರ್ ಗೆ ಸಹಕಾರ ನೀಡಿದ ಪ್ರಕರಣದ ಕುರಿತಂತೆ ಇಲಾಖಾ ತನಿಖೆ ನಡೆಸಿ ವರದಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಆದೇಶಿಸಿದ್ದಾರೆ.
ಈ ಪ್ರಕರಣದ ಕುರಿತು ಕಮಿಷನರ್ ಸೀಮಂತ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ಇಲಾಖೆಯಲ್ಲಿ ಏನು ಕ್ರಮ ಇದೆ ಅದನ್ನೇ ಕೈಗೊಳ್ಳುತ್ತೇವೆ. ಸೂಕ್ತ ತನಿಖೆಯ ಬಳಿಕ ಆರೋಪಿ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.
ಉಗ್ರ ಟಿ. ನಾಸಿರ್ ಜೈಲಿನಲ್ಲಿದ್ದುಕೊಂಡೇ ಬೆಂಗಳೂರಲ್ಲಿನ ಬಾಂಬ್ ಸ್ಫೋಟ ನಡೆಸಲು ಪ್ಲಾನ್ ಮಾಡಿಕೊಂಡಿದ್ದ. ಇದಕ್ಕೆ ಎಎಸ್ಐ ಚಾಂದ್ ಪಾಷಾ ಮನೋವೈದ್ಯ ನಾಗರಾಜ್ ಹಾಗೂ ಫಾತಿಮಾ ಆತನಿಗೆ ಸಹಕಾರ ನೀಡಿದ್ದು, ಈ ಮೂವರನ್ನು ಇದೀಗ ಎನ್ಐಎ ಅರೆಸ್ಟ್ ಮಾಡಿದ್ದು, 6 ದಿನಗಳ ಕಾಲ ವಿಚಾರಣೆಗೆ ಎಂದು ಎನ್ ಐ ಎ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ