Share this news

ನವದೆಹಲಿ : 2025ರ ವೇಳೆಗೆ ಭಾರತದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಸ್ಲೀಪರ್‌ಸೆಲ್‌ ಸ್ಥಾಪಿಸಿ ಈ ಸೆಲ್‌ ಸದಸ್ಯರನ್ನು ಬಳಸಿಕೊಂಡು ಸೇನೆ, ಪೊಲೀಸರು ಮತ್ತು ನಿರ್ದಿಷ್ಟ ಸಮುದಾಯದ ಧಾರ್ಮಿಕ ನಾಯಕರ ಮೇಲೆ ದಾಳಿ ನಡೆಸುವ ಸಂಚನ್ನು ಕಳೆದ ವರ್ಷ ಕರ್ನಾಟಕದ ಬಳ್ಳಾರಿಯಲ್ಲಿ ಬಯಲಿಗೆಳೆಯಲಾದ ಐಸಿಸ್‌ ಉಗ್ರರ ಗುಂಪು ರೂಪಿಸಿತ್ತು ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ .

ಕಳೆದ ವರ್ಷ ಡಿಸೆಂಬರ್‌ನಲ್ಲಿ ಭೇದಿಸಲಾದ ಬಳ್ಳಾರಿ ಐಸಿಸ್‌ ಮಾಡ್ಯೂಲ್‌ ಮತ್ತು ಆ ಸಂಬಂಧ ಬಂಧಿತ ಕರ್ನಾಟಕದ ನಾಲ್ವರು ಸೇರಿದಂತೆ 7 ಜನರ ವಿರುದ್ಧ ರಾಷ್ಟ್ರೀಯ ತನಿಖಾ ದಳ ಆರೋಪಪಟ್ಟಿ ದಾಖಲಿಸಿದ್ದು ಅದರಲ್ಲಿ ಈ ಗಂಭೀರ ವಿಷಯ ಬೆಳಕಿಗೆ ಬಂದಿದೆ. ಕರ್ನಾಟಕದ ಮೊಹಮ್ಮದ್‌ ಸುಲೈಮಾನ್‌ ಮಿನಾಜ್‌, ಮೊಹಮ್ಮದ್‌ ಮುನಿರುದ್ದೀನ್‌, ಸಯ್ಯದ್‌ ಸಮೀರ್‌, ಮೊಹಮ್ಮದ್‌ ಮುಜಮ್ಮಿಲ್‌, ಮಹಾರಾಷ್ಟ್ರದ ಇಕ್ಬಾಲ್‌ ಷೇಕ್‌, ಜಾರ್ಖಂಡ್‌ನ ಮೊಹಮ್ಮದ್‌ ಶಹಬಾಜ್‌ ಮತ್ತು ದೆಹಲಿಯ ಶಯಾನ್‌ ರೆಹಮಾನ್‌ ವಿರುದ್ಧ ಎನ್‌ಐಎ ಆರೋಪಪಟ್ಟಿ ದಾಖಲಿಸಿದೆ.

ಬಂಧಿತ ವ್ಯಕ್ತಿಗಳು ದೇಶದಲ್ಲಿ ಇಸ್ಲಾಮಿಕ್‌ ಆಡಳಿತ ಸ್ಥಾಪಿಸುವ ಗುರಿ ಹೊಂದಿದ್ದರು. ಇದಕ್ಕಾಗಿ 2025ರ ವೇಳೆಗೆ ದೇಶದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಸ್ಲೀಪರ್‌ಸೆಲ್‌ ಸ್ಥಾಪಿಸುವ ಪ್ಲಾನ್ ಮಾಡಿದ್ದರು. ಈ ಸ್ಲೀಪರ್‌ಸೆಲ್‌ಗಳ ಮೂಲಕ ಯೋಧರು, ಪೊಲೀಸರು ಮತ್ತು ನಿರ್ದಿಷ್ಟ ಸಮುದಾಯದ ಧಾರ್ಮಿಕ ನಾಯಕರ ಮೇಲೆ ದಾಳಿಯ ಗುರಿಯನ್ನು ಹಾಕಿಕೊಳ್ಳಲಾಗಿತ್ತು.

ಈ ಎಲ್ಲಾ ಕೃತ್ಯಗಳಿಗಾಗಿ ‘ಮುಜಾಹಿದೀನ್‌’ ಎಂದು ಕರೆಯಲ್ಪಡುವ ಕಾರ್ಯಕರ್ತರ ಪಡೆ ಕಟ್ಟುತ್ತಿದ್ದರು. ಅವರನ್ನು ತಮ್ಮ ಐಸಿಸ್‌ ಸಂಘಟನೆಗೆ ಸೇರ್ಪಡೆ ಮಾಡಿಕೊಳ್ಳುವ ಕೃತ್ಯದಲ್ಲಿ ಇವರೆಲ್ಲಾ ಸಕ್ರಿಯರಾಗಿ ಭಾಗಿಯಾಗಿದ್ದರು ಎಂದು ಎನ್‌ಐಎ ತನ್ನ ಆರೋಪಪಟ್ಟಿಯಲ್ಲಿ ದಾಖಲಿಸಿದೆ.

 

 

                        

                          

 

 

 

 

 

                        

                          

 

Leave a Reply

Your email address will not be published. Required fields are marked *