ಕಾರ್ಕಳ ಆ. 08: ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ವತಿಯಿಂದ ತುಳು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕೆಸರ್ದ ಕಮ್ಮೆನ ಕಾರ್ಯಕ್ರಮವು ಕಾರ್ಕಳದ ಸಾಲ್ಮರ ಬಳಿಯ ಗುರುದೀಪ್ ಗಾರ್ಡನ್ ಬಳಿ ಆ.11ರಂದು ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷರು ಹಾಗೂ ಉಭಯ ಜಿಲ್ಲೆಗಳ ಕಂಬಳ ಶಿಸ್ತು ಸಮಿತಿ ಅಧ್ಯಕ್ಷರಾದ ಭಾಸ್ಕರ್ ಎಸ್ ಕೋಟ್ಯಾನ್ ನೆರವೇರಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಹಾಗೂ ಸಮಾಜ ಸೇವಕರಾದ ಬೋಳ ಪ್ರಶಾಂತ್ ಕಾಮತ್ ವಹಿಸಲಿದ್ದಾರೆ.
ಆಷಾಡ ಕಾರ್ಯಕ್ರಮದ ಬಗ್ಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ಮಾತನಾಡಲಿದ್ದಾರೆ. ಮುಖ್ಯ ಉಪಸ್ಥಿತಿಯಾಗಿ ಬೋಳಸ್ ಪ್ರೈ ಲಿ. ನ ಮೆನೆಜಿಂಗ್ ಡೈರೆಕ್ಟರ್ ಬೋಳ ದಾಮೋದರ ಕಾಮತ್ ಹಾಗೂ ಚೇತನ ವಿಶೇಷ ಶಾಲೆಯ ಸಂಚಾಲಕರಾದ ರಘುನಾಥ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ದಿ. ವಿಫುಲ್ ಕಿಣಿ ಸ್ಮರಣಾರ್ಥ ಪುರುಷರಿಗೆ ಹಗ್ಗ ಜಗ್ಗಾಟ ಕಾರ್ಯಕ್ರಮ ನಡೆಯಲಿದೆ.
ಈ ಪಂದ್ಯಾಟದಲ್ಲಿ ಗೆದ್ದವರಿಗೆ ಪ್ರಥಮ ರೂ 7 ಸಾವಿರ ನಗದು ಹಾಗೂ ಸ್ಮರಣಿಕೆ, ದ್ವಿತೀಯ 4 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಲಿದ್ದಾರೆ.
ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಗೆದ್ದವರಿಗೆ ಪ್ರಥಮ 3 ಸಾವಿರ ಮತ್ತು ಸ್ಮರಣಿಕೆ, ದ್ವಿತೀಯ 2 ಸಾವಿರ ಮತ್ತು ಸ್ಮರಣಿಕೆ ನೀಡಲಾಗುತ್ತದೆ.
ದಿ. ದಿನೇಶ್ ನಾಯಕ್( ದಿನ್ನು ) ಸ್ಮರಣಾರ್ಥ ವಾಲಿ ಬಾಲ್ ಪಂದ್ಯಾಟ ಪುರುಷರಿಗೆ ಪ್ರಥಮ 5 ಸಾವಿರ ಮತ್ತು ಸ್ಮರಣಿಕೆ, ದ್ವಿತೀಯ 3 ಸಾವಿರ ಮತ್ತು ಸ್ಮರಣಿಕೆಯನ್ನು ನೀಡಲಾಗುತ್ತದೆ.
ಮಕ್ಕಳಿಗೆ ನಿಧಿ ಶೋಧ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಮತ್ತು ರೈನ್ ಡಾನ್ಸ್ ನಡೆಯಲಿದೆ. ತುಳು ನಾಡ ಆಟಿಯ ವೈವಿಧ್ಯ ಆಹಾರ ಖಾದ್ಯ ಏರ್ಪಡಿಸಲಾಗಿದೆ.
ಸನ್ಮಾನ : ಈ ಸಂದರ್ಭದಲ್ಲಿ 19 ಮಂದಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುವುದು ಎಂದು ಸಮಿತಿಯ ಪ್ರಕಣೆ ತಿಳಿಸಿದೆ
`