Share this news

ಉಡುಪಿ : ಸ್ಯಾಂಡಲ್‌ವುಡ್‌ನ ಸೂಪರ್‌ಹಿಟ್ ಚಲನಚಿತ್ರ ಕಾಂತಾರದ ಕಂಬಳದ ದೃಶ್ಯಗಳಲ್ಲಿ ನಟ ರಿಷಬ್ ಶೆಟ್ಟಿ ಅವರೊಂದಿಗೆ ತೆರೆಯ ಮೇಲೆ ಮಿಂಚಿದ್ದ ಜನಪ್ರಿಯ ಕೋಣ ‘ಅಪ್ಪು’ ಸಾವನ್ನಪ್ಪಿದೆ. ಬೈಂದೂರು ತಾಲೂಕಿನ ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಅಪ್ಪು ಮತ್ತು ಕಾಲಾ ಎಂಬ ಎರಡು ಕೋಣಗಳನ್ನು ಬಹಳ ಪ್ರೀತಿಯಿಂದ ಸಾಕುತ್ತಿದ್ದರು.

ಕಾಂತಾರ ಚಿತ್ರದ ಶೂಟಿಂಗ್‌ಗೂ ಮೊದಲಿನಿಂದಲೂ ಈ ಕೋಣಗಳ ಮೂಲಕವೇ ಚಿತ್ರತಂಡಕ್ಕೆ ಕಂಬಳದ ತರಬೇತಿ ನೀಡಲಾಗಿತ್ತು. ಪರಮೇಶ್ವರ ಭಟ್ ಅವರ ಮಗಳು ಚೈತ್ರಾ ಪರಮೇಶ್ವರ ಭಟ್ ಅವರು ಅಪ್ಪು ಕೋಣದ ಆರೈಕೆ ಮಾಡುತ್ತಿದ್ದರು. ಮೃತನಾದ ಅಪ್ಪು ಕೋಣ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ, ಕಂಬಳದ ಕಣದಲ್ಲಿಯೂ ಚಾಂಪಿಯನ್ ಆಗಿ ಗುರುತಿಸಿಕೊಂಡಿತ್ತು. ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಗಳಿಸಿತ್ತು. ಕುಂದಾಪುರ ಭಾಗದಲ್ಲಿ ನಡೆದ ಕಂಬಳಗಳಲ್ಲಿ ಸತತ ಐದು ವರ್ಷಗಳ ಕಾಲ ಚಾಂಪಿಯನ್ ಆಗಿದ್ದ ಅಪ್ಪು, ಬೆಂಗಳೂರಿನಲ್ಲಿ ನಡೆದ ಕಂಬಳದ ಕನೆಹಲಗೆ ವಿಭಾಗದಲ್ಲೂ ಪ್ರಥಮ ಪ್ರಶಸ್ತಿ ಪಡೆದಿತ್ತು. ಕರಾವಳಿಯ ಹಲವು ಕಂಬಳಗಳಲ್ಲಿ ಈ ಕೋಣ ಕೀರ್ತಿ ಬಹುಮಾನ ಸಂಪಾದಿಸಿತ್ತು.

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *