
ಉಡುಪಿ,ಮಾ.6: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 2026-27 ರ ಬಜೆಟ್ ರಾಜ್ಯದ ಆರ್ಥಿಕ ಮತ್ತು ಅಭಿವೃದ್ದಿ ಸಾಧನೆಯ ಗುರಿಯೊಂದಿಗಿನ ಶೈಕ್ಷಣಿಕ ಸಾಮಾಜಿಕ ಅಭ್ಯುದಯದ ಸಮತೋಲನದ ಬಜೆಟ್ ಇದಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಬಣ್ಣಿಸಿದ್ದಾರೆ.
ನಿರುದ್ಯೋಗ ನಿವಾರಣೆಯ ಗುರಿಯೊಂದಿಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ಭರ್ತಿ, ಮಹಿಳಾ ಅಭ್ಯುದಯ ಗುರಿಸಾಧನೆಗೆ ವಿವಿಧ ಯೋಜನೆಗಳಡಿ 94,663 ಕೋಟಿ ರೂ. ಮಕ್ಕಳ ಮೂಲಭೂತ ಅಭಿವೃದ್ದಿ ಸಾಧನೆಗಾಗಿ ವಿವಿಧ ಯೋಜನೆಗಳಡಿ 63,135 ಕೋಟಿ ರೂ. ಶೈಕ್ಷಣಿಕ ಅಭಿವೃದ್ಧಿ ಯೋಜನೆ ಯಡಿ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತಿಸಲು 4.48ಕೋಟಿ ರೂ. ಮೀಸಲು, ಪದವೀಪೂರ್ವ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆಯೇ ಮೊದಲಾದ ಶೈಕ್ಷಣಿಕ ಅಭಿವೃದ್ದಿಯ ವಿದ್ಯಾರ್ಥಿ ಪರ ಯೋಜನೆಗಳು ವರ್ತಮಾನದ ಶೈಕ್ಷಣಿಕ ಆಧ್ಯತೆಯಾಗಿದ್ದು ಸ್ವಾಗತಾರ್ಹವಾಗಿದೆ.
ಕೃಷಿ ಹಾಗೂ ಕರಾವಳಿ ಮೀನುಗಾರಿಕಾ ಯೋಜನೆಯಡಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸೌರ ಕೃಷಿ ಯೋಜನೆ ಜಾರಿ, ರೈತರ ಬೆಳೆವಿಮೆಗಾಗಿ 6213ಕೋ.ರೂ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ಸಾಲ, ಮೀನುಗಾರಿಕಾ ಕಿಟ್ ಮೌಲ್ಯ 10 ಸಾವಿರ ರೂ.ದಿಂದ 20 ಸಾವಿರ ರೂ.ಗೆ ಹೆಚ್ಚಳ, ಮೀನುಗಾರಿಕಾ ರಸ್ತೆಗಳ ಅಭಿವೃದ್ದಿಗಾಗಿ 20ಕೋಟಿ ರೂ. ಮೀಸಲಿಡಲಾಗಿದ್ದು ಒಟ್ಟಾರೆಯಾಗಿ ಇದೊಂದು ಸಮಗ್ರ ಅಭಿವೃದ್ಧಿಯ ಗುರಿಯೊಂದಿಗಿನ ಬಜೆಟ್ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.


.
.
.
.
.
.
.
.
.
.
