ಧಾರವಾಡ: ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಸಭೆಗೆ ನುಗ್ಗಿ ಪ್ರತಿಭಟನೆ ನಡೆಸಿದ ಘಟನೆಯಿಂದ ಕೆಂಡಾಮAಡಲರಾಗಿದ್ದ ಸಿಎಂ ಸಿದ್ಧರಾಮಯ್ಯ ವೇದಿಕೆ ಮೇಲೆಯೇ ಹೆಚ್ಚುವರಿ ಎಸ್ಪಿ ಆಗಿದ್ದ ನಾರಾಯಣ ಭರಮನಿ ಅವರನ್ನು ಭದ್ರತಾಲೋಪದ ವಿರುದ್ದ ಕೆಂಡಕಾರಿ ಕೆನ್ನೆಗೆ ಹೊಡೆಯಲು ಕೈಎತ್ತಿದ್ದರು. ಈ ಘಟನೆ ನಡೆದು 2 ತಿಂಗಳ ಬಳಿಕ ಅಡಿಷನಲ್ ಎಸ್ಪಿ ನಾರಾಯಣ ಭರಮನಿ ಸ್ವಯಂ ನಿವೃತ್ತಿಗೆ ಮುಂದಾಗಿ ಸರ್ಕಾರಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಕುರಿತು ಇದೀಗ ನಾರಾಯಣ ಬರಮಣಿ ಸ್ಪಷ್ಟನೆ ನೀಡಿದ್ದು, ನನ್ನ ರಾಜೀನಾಮೆ ಅಂಗೀಕಾರದ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು, ಆದರೆ ನಾನು ದೈನಂದಿನ ಕೆಲಸಕ್ಕೆ ಮತ್ತೆ ಹಾಜರಾಗುತ್ತಿದ್ದೇನೆ ಎಂದು ಹೇಳಿದ್ದಾರೆ. ನಾನು ಶಿಸ್ತಿನ ಇಲಾಖೆಯಲ್ಲಿ ಇದ್ದೇನೆ. ನನ್ನ ಭಾವನೆಗಳನ್ನು ಪೊಲೀಸ್ ಇಲಾಖೆ ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಮೇಲಾಧಿಕಾರಿಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಸಚಿವ ಜಿ ಪರಮೇಶ್ವರ್ ರವರು ನನ್ನ ಜೊತೆಗೆ ಮಾತನಾಡಿದ್ದಾರೆ. ಈಗ ನಾನು ದೈನಂದಿನ ಕೆಲಸಕ್ಕೆ ಹಾಜರಾಗುತ್ತಿದ್ದೇನೆ ರಾಜೀನಾಮೆ ಅಂಗೀಕಾರ ಕುರಿತು ಸರ್ಕಾರ ನಿರ್ಧರಿಸುತ್ತದೆ ನಾನೀಗ ದೈನಂದಿನ ಕೆಲಸಕ್ಕೆ ಹಾಜರಾಗುತ್ತೇನೆ ಎಂದು ಧಾರವಾಡದಲ್ಲಿ ಎಎಸ್ಪಿ ನಾರಾಯಣ ಭರಮಣಿ ಹೇಳಿಕೆ ನೀಡಿದ್ದಾರೆ.