ಕಾರ್ಕಳ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಅಜೆಕಾರು ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪತ್ನಿ ಪ್ರತಿಮಾ ಹಾಗೂ ಆಕೆಯ ಲವರ್ ದಿಲೀಪ್ ಹೆಗ್ಡೆಯವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮೃತ ಬಾಲಕೃಷ್ಣ ಪೂಜಾರಿ ಸಂಬAಧಿಕರು ಒತ್ತಾಯಿಸಿದ್ದಾರೆ.

ಬಾಲಕೃಷ್ಣ ಪೂಜಾರಿಯವರ ಸಹೋದರ ಪ್ರಕಾಶ್ ಪೂಜಾರಿ ಸೋಮವಾರ ಕಾರ್ಕಳದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ಬಾಲಕೃಷ್ಣ ಅವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಹಾಗೂ ಸಾಯುವ ಸಂದರ್ಭದಲ್ಲಿ ಮುಖದಲ್ಲಿ ಗಾಯಗಳಾಗಿದ್ದು ಪೋಸ್ಟ್ ಮಾರ್ಟಮ್ ವರದಿಯಲ್ಲಿ ಬಹಿರಂಗವಾಗಿದೆ. ಗಂಡನನ್ನು ಉಸಿರುಗಟ್ಟಿ ಕೊಲೆಗೈದಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಕ್ಷಣಿಕ ಸುಖಕ್ಕಾಗಿ ಕೈಹಿಡಿದ ತನ್ನ ಗಂಡನನ್ನೇ ಅಮಾನುಷವಾಗಿ ಹತ್ಯೆಗೈದ ಪತ್ನಿ ಪ್ರತಿಮಾ ಹಾಗೂ ಹತ್ಯೆಗೆ ಸಹಕಾರ ನೀಡಿದ ದಿಲೀಪ್ ಹೆಗ್ಡೆಗೆ ಜೀವಾವಧಿ ಶಿಕ್ಷೆಯಾಗಬೇಕು , ಈ ನಿಟ್ಟಿನಲ್ಲಿ ಪೊಲೀಸರು ನಿಷ್ಪಪಕ್ಷಪಾತ ತನಿಖೆ ನಡೆಸಬೇಕೆಂದು ಪ್ರಕಾಶ್ ಪೂಜಾರಿ ಒತ್ತಾಯಿಸಿದರು.

ಬಾಲಕೃಷ್ಣ ಪೂಜಾರಿ ಹತ್ಯೆ ಆರೋಪಿ ದಿಲೀಪ್ ಹೆಗ್ಡೆ ಅಮಾಯಕ, ಈ ಪ್ರಕರಣದಿಂದ ಆತನ ಹೆಸರು ಕೈಬಿಡುವಂತೆ ಆರೋಪಿಯ ಪೋಷಕರು ಪೊಲೀಸರಿಗೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದ ಪ್ರಕಾಶ್ ಪೂಜಾರಿ. ಯಾವುದೇ ಕಾರಣಕ್ಕೂ ಪೊಲೀಸರು ಈ ಪ್ರಕರಣದ ತನಿಖೆಯ ಹಾದಿಯನ್ನು ದಿಕ್ಕುತಪ್ಪಿಸಬಾರದು, ಎಲ್ಲಾ ಸಾಕ್ಷö್ಯಗಳನ್ನು ಕಲೆಹಾಕಿ ಕೊಲೆಗಡುಕರಿಗೆ ಶಿಕ್ಷೆ ನೀಡಿ, ಮಗನನ್ನು ಕಳೆದುಕೊಂಡು ರೋಧಿಸುತ್ತಿರುವ ತಂದೆ ತಾಯಿಗೆ ಪೊಲೀಸರು ನ್ಯಾಯ ದೊರಕಿಸಿ ಕೊಡಬೇಕೆಂದು ಅವರು ಮನವಿ ಮಾಡಿದರು.

ಮೃತರ ಸಹೋದರಿ ಶಶಿ ಎಂಬವರು ಮಾತನಾಡಿ,ನನ್ನ ಅಣ್ಣನನ್ನು ಕೊಲ್ಲುವ ಉದ್ದೇಶದಿಂದಲೇ ಆಸ್ಪತ್ರೆಯಿಂದ ಬಲವಂತವಾಗಿ ಊರಿಗೆ ಕರೆದುಕೊಂಡು ಬಂದಿದ್ದಳು. ಗಂಡ ಎನ್ನುವ ಕನಿಷ್ಠ ಪ್ರೀತಿ ಕಾಳಜಿಯೂ ಇಲ್ಲದ ಪ್ರತಿಮಾ ಅವನ ಸಾವನ್ನು ಬಯಸಿದ್ದಳು. ಅದಕ್ಕಾಗಿ ಚಿಕಿತ್ಸೆ ಕೊಡಿಸುವ ನಾಟಕವಾಡಿ ಬೇರೆಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸಿದ್ದಳು.ಕೊನೆಗೂ ಅಣ್ಣ ಬಾಲಕೃಷ್ಣ ಗುಣಮುಖನಾದ ಎನ್ನುವ ವಿಷಯ ತಿಳಿಯುತ್ತಲೇ ಪ್ರತಿಮಾ ಹಾಗೂ ಅವಳ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಅಣ್ಣನನ್ನು ಕೊಲ್ಲುವ ಭಯಾನಕ ಸಂಚು ರೂಪಿಸಿ ಕೊನೆಗೂ ಅವನನ್ನು ಬಲಿಪಡೆದಿದ್ದಾರೆ. ಇಂತಹ ಕ್ರೂರಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮೃತರ ತಂದೆ ಸಂಜೀವ ಪೂಜಾರಿ, ತಾಯಿ ಲೀಲಾ, ಸಂಬAಧಿಕರಾದ ಸಂದೀಪ್ ಪೂಜಾರಿ, ವನಜಾ ಹಾಗೂ ಭವ್ಯ ಉಪಸ್ಥಿತರಿದ್ದರು
ಸುದ್ದಿಗೋಷ್ಟಿಯ ಬಳಿಕ ಮೃತ ಬಾಲಕೃಷ್ಣ ಪೂಜಾರಿ ಸಂಬಂಧಿಕರು ಹತ್ಯೆ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿ ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು





























































































