Share this news

ಕಾರ್ಕಳ: ತಾಲೂಕಿನ ರಂಗನಪಲ್ಕೆ ಪರಿಸರದ ನಿರ್ಜನ ಪ್ರದೇಶದಲ್ಲಿ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ನಡೆದ ಅಮಾನವೀಯ ಪೈಶಾಚಿಕ ಕೃತ್ಯ ಖಂಡನೀಯ, ಇದೊಂದು ಜೆಹಾದ್ ಕೃತ್ಯವಾಗಿದೆ ಎಂದು ಸಮಾಜ ಸೇವಕಿ ರಮಿತಾ ರಾವ್ ಆರೋಪಿಸಿದ್ದಾರೆ. ಕಾರ್ಕಳದಲ್ಲಿ ಮಾದಕವಸ್ತುಗಳ ಅಂದರೆ ಡ್ರಗ್ಸ್ ಜಾಲವು ವ್ಯಾಪಕವಾಗಿ ಹರಡಿಕೊಂಡಿದೆ ಹಾಗೂ ಅವರ ಟಾರ್ಗೆಟ್ ಕೂಡ ನಮ್ಮ ಹಿಂದೂ ಯುವತಿಯರು ಎಂಬುದಕ್ಕೆ ಇಲ್ಲಿ ಸ್ಪಷ್ಟ ನಿದರ್ಶನವಿದೆ, ಹೀಗಾಗಿ ಇದರ ಹಿಂದಿರುವ ಕಾಣದ ಕೈಗಳನ್ನು ಪೊಲೀಸ್ ಇಲಾಖೆ ಸಮಗ್ರವಾಗಿ ತನಿಖೆ ನಡೆಸಬೇಕು ಹಾಗೂ ಮಟ್ಟ ಹಾಕುವ ಮೂಲಕ ತಾರ್ಕಿಕ ಅಂತ್ಯ ಹಾಡಿ ಇದರ ಹಿಂದಿರುವ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚಬೇಕು ಈ ಹಿಂದೆಯೂ ಇಂತಹ ಕೃತ್ಯವನ್ನು ಎಸಗಿರುವ ಸಾಧ್ಯತೆಗಳಿದ್ದು ಉನ್ನತ ತನಿಖೆ ನಡೆಸಬೇಕು ಹಾಗೂ ಇಂತಹ ಸಮಾಜ ದ್ರೋಹಿ ಕೆಲಸದ ವಿರುದ್ಧ ರಾಜಕೀಯ ವೈಷಮ್ಯ ಮರೆತು ಸಮಾಜದಲ್ಲಿ ಸಾಮರಸ್ಯದ ವಾತರಣ ಮರು ಸ್ಥಾಪಿಸಬೇಕಾಗಿ ರಮಿತಾ ರಾವ್ ಒತ್ತಾಯಿಸಿದ್ದಾರೆ.

                        

                          

                        

                          

 

`

Leave a Reply

Your email address will not be published. Required fields are marked *