ಮಂಗಳೂರು : ತಮಿಳುನಾಡಿನಲ್ಲಿ ಉಂಟಾದ ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯಕ್ಕೂ ತಟ್ಟಿದ್ದು, ಇದೀಗ ಮಂಗಳೂರಿನ ಬಂದರಿನಲ್ಲಿ ಇದಂತಹ ಸುಮಾರು ಹತ್ತಕ್ಕೂ ಹೆಚ್ಚು ಮೀನುಗಾರಿಕಾ ಬೋಟ್ ಗಳು ಸಮುದ್ರದಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಮಂಗಳೂರಿನ ಬಂದರಿನಲ್ಲಿ ಲಂಗರು ಹಾಕಿದ್ದ, ಮೀನುಗಳಿಗಾಗಿ ಬಲೆ ಬೀಸುವ ದೋಣಿಗಳು ಕೊಚ್ಚಿ ಹೋಗಿದ್ದು, ಮಂಗಳೂರಿನಲ್ಲಿ ಮೀನುಗಾರಿಕೆ ಹಲವು ಬೋಟ್ ಗಳು ಸಹ ಕೊಚ್ಚಿ ಹೋಗಿವೆ. ಇನ್ನೊಂದು ಕಡೆ ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಸಮೀಪ ಆದ್ಯಪಾಡಿಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಭೂ ಕುಸಿತ ಹಿನ್ನೆಲೆಯಲ್ಲಿ ಬಜಪೆ ಮತ್ತು ಆದ್ಯಪಾಡಿಯ ರಸ್ತೆಯ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದ್ದು, ಮಾನಾ ಶಾಲಿಯಾನ್ ಎಂಬುವರಿಗೆ ಸೇರಿದ ಮನೆಗೆ ಭೂಕುಸಿತದ ಹಾನಿ ಉಂಟಾಗಿದೆ.
ಉಡುಪಿ ಜಿಲ್ಲೆಯಲ್ಲಿಯೂ ಮಳೆಯಬ್ಬರ ಜೋರಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರುವAತೆ ಜಿಲ್ಲಾಡಳಿತ ಸೂಚನೆ ನೀಡಿದೆ.