ಬೆಂಗಳೂರು:ಅಪರಿಚಿತ ಸಾಕ್ಷಿದಾರನೊಬ್ಬ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹಾಗೂ ತಾನು ಸಾಕ್ಷ್ಯ ನುಡಿಯುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಸೌಜನ್ಯ ಕೊಲೆ ಪ್ರಕರಣಕ್ಕೆ ಮರುಜೀವ ಬಂದಿದ್ದು,ಇದೇ ವಿಚಾರದಲ್ಲಿ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ನೂರಾರು ಕೊಲೆ ಪ್ರಕರಣಗಳ ಆರೋಪಗಳ ಕುರಿತ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದ್ದು,ಈ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ರಾಜ್ಯ ಗೃಹ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿಯವರ ನೇತೃತ್ವದ ಎಸ್ಐಟಿ ತಂಡದಲ್ಲಿ ಒಟ್ಟು ನಾಲ್ವರು ಐಪಿಎಸ್ ಅಧಿಕಾರಗಳಾದ ಅನುಚೇತ್, ಜಿತೇಂದ್ರ ಕುಮಾರ್ ಹಾಗೂ ಸೌಮ್ಯಲತಾ ಇದ್ದಾರೆ. ಅತೀ ಶೀಘ್ರದಲ್ಲೇ ಅತ್ಯಂತ ಹೈಪ್ರೊಫೈಲ್ ಪ್ರಕರಣದ ಬಗ್ಗೆ ತನಿಖೆ ಆರಂಭಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಸೌಜನ್ಯ ಸೇರಿದಂತೆ ನೂರಾರು ಕೊಲೆಗಳು ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಅಪರಾಧಿ ಯಾರೇ ಆಗಿರಲಿ, ಎಷ್ಟೇ ಪ್ರಭಾವಿ ಆದರೂ ಶಿಕ್ಷೆ ಆಗಬೇಕು ಆ ಮೂಲಕ ಕಾನೂನು ಎಲ್ಲರಿಗೂ ಒಂದೇ ಎನ್ನುವುದು ಸಂದೇಶ ರವಾನೆಯಾಗಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.
