Share this news

ಹೆಬ್ರಿ: ಅಮೃತಭಾರತಿ ಸೇವಾಸಂಗಮ ಶಿಶುಮಂದಿರದಲ್ಲಿ ರಂಗಮಂಚ ಕಾರ್ಯಕ್ರಮ ಮತ್ತು ಪೋಷಕರ ಸಭೆ ನಡೆಯಿತು.
ಮುಖ್ಯಅತಿಥಿ, ಆಪ್ತ ಸಮಾಲೋಚಕಿ ಸ್ವರ್ಣ ಕುಂದಾಪುರ ಇವರು ಶಿಶು ಶಿಕ್ಷಣದ ಹನ್ನೆರಡು ಶೈಕ್ಷಣಿಕ ವ್ಯವಸ್ಥೆಯಲ್ಲಿ ಒಂದಾದ ರಂಗಮಂಚ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುದರಿಂದ ಸಮಾಜದ ಆಸ್ತಿಯನ್ನಾಗಿ ಮಾಡಲು ಸಾಧ್ಯ. ಅಲ್ಲದೆ ಬಾಲ್ಯದಲ್ಲಿ ನೀಡಿದ ಪ್ರೀತಿ, ನಿಮ್ಮ ಮುಪ್ಪಿನಲ್ಲಿ ವೃದ್ಧಾಶ್ರಮಕ್ಕೆ ನಿಮ್ಮನ್ನು ಸೇರಿಸದೆ ಪ್ರೀತಿಯನ್ನು ಮರಳಿ ಪಡೆಯುವ ಸಂಸ್ಕಾರ ಶಿಕ್ಷಣ ನಿಮ್ಮದಾಗಲಿ. ಹಾಗೆಯೇ ಹೆತ್ತವರು ಮಕ್ಕಳ ಮುಂದೆ ಮೊಬೈಲ್ ಬಳಕೆ ಕಡಿಮೆ ಮಾಡಿ, ಹೆಚ್ಚಿನ ಸಮಯವನ್ನು ಚಟುವಟಿಕೆಗಳ ಮೂಲಕ ಸದುಪಯೋಗವನ್ನು ಮಾಡಿರಿ, ಮಕ್ಕಳು ಬೀಜದಂತೆ , ಉತ್ತಮ ಫಲ ಬರಲು ಸಂಸ್ಕಾರ ಅತ್ಯಗತ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಕಾರ ಶಿಕ್ಷಣ ಪ್ರಮುಖ್ ಮೀನಾಕ್ಷಿ ಹಾಗೂ ಪೋಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಮಲ್ಲಿಕಾ ಸ್ವಾಗತಿಸಿ, ಅನಿತಾ ಮಾತಾಜಿ ವಂದಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *