Share this news

ಕುಂದಾಪುರ: ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಶಿಕ್ಷಕರಿಗೆ ಆಯೋಜಿಸಿದ ಹ್ಯಾಪಿ ಲರ್ನಿಂಗ್ , ತರಗತಿ ಸಂವಹನ ಕಾರ್ಯಗಾರವು ವಿದ್ಯಾಭಾರತಿ ಹಾಗೂ ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರ ಇವುಗಳ ಆಶ್ರಯದಲ್ಲಿ ಸೇವಾಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾಧ್ಯಕ್ಷ ಸಿದ್ದಾಪುರ ಪಾಂಡುರಂಗ ಪೈ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಗಾರದ ವೇದಿಕೆಯಲ್ಲಿ ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯ ಗೌರವಾಧ್ಯಕ್ಷ ಸಂಜೀವ ಗುಂಡ್ಮಿ , ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯ ಕಾರ್ಯದರ್ಶಿ ಕಮಲಾಕ್ಷ ಪೈ , ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ್ ಹೈಕಾಡಿ , ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯ ಮುಖ್ಯೋಪಾಧ್ಯಾಯ ವಿಷ್ಣು ಮೂರ್ತಿ ಭಟ್, ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ಉಪಾಧ್ಯಕ್ಷ ಅರುಣ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಒಟ್ಟು 115 ಶಿಕ್ಷಕರು ಕಾರ್ಯಗಾರದಲ್ಲಿ ಭಾಗವಹಿಸಿದರು. ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಭಟ್ ಕಾರ್ಕಳ ಇವರು ಮೂರು ಅವಧಿ ಗಳಲ್ಲಿ ತರಗತಿ ಸಂವಹನ ಸಂಬಂಧಿಸಿದ ವಿಚಾರಗಳನ್ನು ಚಟುವಟಿಕೆ ಆಧಾರಿತ ರೂಪದಲ್ಲಿ ತರಬೇತಿಯನ್ನು ನೀಡಿದರು.

ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ಗೌರವ ಕಾರ್ಯದರ್ಶಿ ಸಂಜೀವ್ ಗುಂಡ್ಮಿ ಪ್ರಸ್ತಾವನೆಗೈದರು.ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯ ಮಾತಾಜಿ ಸಂಧ್ಯಾ ಭಟ್ ವಂದಿಸಿದರು .
ಕಾರ್ಯಕ್ರಮ ನಿರೂಪಣೆ ಶಕೀಲಾ ಮಾತಾಜಿ ನಿರ್ವಹಿಸಿದರು

 

 

 

 

                        

                          

 

 

 

 

 

                        

                          

Leave a Reply

Your email address will not be published. Required fields are marked *