ಬೆಂಗಳೂರು, ಮಾ.18 : ರಾಜ್ಯದಲ್ಲಿ ಸಧ್ಯ ಗೃಹಬಳಕೆ ಸಿಲಿಂಡರ್ ಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಆಹಾರ ಸಚಿವ ಮುನಿಯಪ್ಪ ವಿಧಾನ ಪರಿಷತ್ ನಲ್ಲಿ ಸ್ಪಷ್ಟಪಡಿಸಿದರು. ಸದಸ್ಯರೊಬ್ಬರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಗೃಹಬಳಕೆ ಸಿಲಿಂಡರ್ ಎಷ್ಟು ಪೂರೈಕೆ ಆಗಬೇಕು ಅಷ್ಟು ಪೂರೈಕೆ ಆಗುತ್ತಿದೆ. ರಾಜ್ಯದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಸಿಲಿಂಡರ್ ಬಳಕೆ ಆಗುತ್ತಿದ್ದು, ಎಲ್ಲಿಯೂ ಗ್ಯಾಸ್ ಅಭಾವ ಎದುರಾಗಿಲ್ಲ ಎಂದರು.
ವಾಣಿಜ್ಯ ಬಳಕೆಯ ಸಿಲಿಂಡರ್ ಕೊರೆಯಿದ್ದು, ಈ ವಿಚಾರಕ್ಕೆ ಸಂಬAಧಪಟ್ಟAತೆ ರೆಸ್ಟೋರೆಂಟ್ ಹೋಟೆಲುಗಳಿಗೆ 1 ಸಾವಿರ ಗ್ಯಾಸ್ ಸಿಲಿಂಡರ್ ಗಳನ್ನು ಮಾತ್ರ ವಿತರಣೆ ಮಾಡಲಾಗುತ್ತದೆ. ಪರಿಸ್ಥಿತಿ ಸುಧಾರಿಸುವ ತನಕ ಹೊಟೇಲ್ ಉದ್ಯಮಿಗಳು ಸಹಿಸಿಕೊಳ್ಳಬೇಕು ಎಂದು ಸಚಿವ ಕೆ ಎಸ್ ಮುನಿಯಪ್ಪ ವಿಧಾನ ಪರಿಷತ್ ನಲ್ಲಿ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ಕೂಡ ಇರಾನ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಗ್ಯಾಸ್ ಬಿಕ್ಕಟ್ಟಿನ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದೆ. 16 ಹಡಗುಗಳು ಕ್ಯೂನಲ್ಲಿ ಇದೆ ಅದು ಬಂದರೆ ಸಿಲಿಂಡರ್ ಸಮಸ್ಯೆ ಬಗೆಹರಿಯುತ್ತದೆ. ಹೋಟೆಲ್ ಮಾಲೀಕರು ಇನ್ನೂ ಒಂದು ವಾರಗಳ ಕಾಲ ಸಹಿಸಿಕೊಳ್ಳಬೇಕು. ನಾವು ಹೋಟೆಲ್ ಅಸೋಸಿಯೇಷನ್ ಜೊತೆಗೆ ಮಾತನಾಡಿದ್ದೇವೆ. ಒಂದು ವಾರ ಸಹಿಸಿಕೊಂಡರೆ 15 ಸಾವಿರ ಸಿಲಿಂಡರ್ ಸಂಗ್ರಹಿಸಿ ಹಂಚಿಕೆ ಮಾಡುತ್ತೇವೆ. ಯುದ್ಧ ಆಗುತ್ತಿದೆ ಹೋಟೆಲ್ ನವರು ಸ್ವಲ್ಪ ಸಹಕಾರ ಕೊಡಬೇಕು. ಶಾಸಕರ ಭವನಕ್ಕೆ ಕೊಡಬೇಕಾದ ಗ್ಯಾಸ್ ನಲ್ಲಿ 50 ಪ್ರತಿಶತ ಪೂರೈಸುತ್ತೇವೆ ಎಂದು ವಿಧಾನ ಪರಿಷತ್ತಿನಲ್ಲಿ ಹೇಳಿಕೆ ನೀಡಿದರು.















.
.
.
.
.
.
.
.
.
.
