ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಜೂ. 4 ರಂದು ಮೂವರು ವ್ಯಕ್ತಿಗಳು ನಕಲಿ ಆಧಾರ್ ಕಾರ್ಡ್ ಬಳಸಿ ಅಕ್ರಮವಾಗಿ ಸಂಸತ್ ಭವನಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ
ಈ ಮೂವರನ್ನು ಸಿಐಎಸ್ಎಫ್ ಅಧಿಕಾರಿಗಳು ವಶಕ್ಕೆ ಪಡೆದರು. ಕಾಸಿಮ್, ಮೋನಿಸ್ ಮತ್ತು ಶೋಯೆಬ್ ಎನ್ನುವ ಮೂವರು ವ್ಯಕ್ತಿಗಳು ಕಾರ್ಮಿಕರಂತೆ ನಟಿಸಿ ಗೇಟ್ ಸಂಖ್ಯೆ 3 ರಿಂದ ಹೆಚ್ಚು ಭದ್ರತೆಯಿರುವ ಸಂಸತ್ ಕಟ್ಟಡವನ್ನು ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಸತ್ ಸಂಕೀರ್ಣವನ್ನು ಪ್ರವೇಶಿಸುವ ಪ್ರಯತ್ನದಲ್ಲಿ ಅವರು ಭದ್ರತಾ ಸಿಬ್ಬಂದಿಗೆ ನಕಲಿ ಆಧಾರ್ ಕಾರ್ಡ್‌ಗಳನ್ನು ತೋರಿಸಿದ್ದಾರೆ, ಆದರೆ ಇವುಗಳನ್ನು ಪರಿಶೀಲಿಸಿದ ಭದ್ರತಾ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ ಎಂದು ಸಂಸತ್ ಭವನದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ