ಅಜೆಕಾರು : ಶ್ರೀ ಮಹಾದೇವಿ ಭಜನಾ ಮಂಡಳಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಮರ್ಣೆ ಅಜೆಕಾರು ಮತ್ತು ಶ್ರೀ ಮಹಾದೇವಿ ಕ್ರಿಕೆಟರ್ಸ್ ನಡಿಬೆಟ್ಟು ಅಜೆಕಾರು ಇವರ ಜಂಟಿ ಸಹಯೋಗದಲ್ಲಿ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ಬಾಂಧವರಿಗೆ ಕೆಸರ್ಡೊಂಜಿ ದಿನ ಕ್ರೀಡಾಕೂಟವು ಅಜೆಕಾರು ಪೋಲಿಸ್ ಸ್ಟೇಷನ್ ರಸ್ತೆಯ ಬಳಿ ಅಂತೋನಿಮಾರ್ ಗದ್ದೆಯಲ್ಲಿ ನಡೆಯಲಿದೆ.
ಮಹಿಳೆಯರಿಗೆ, ಪುರುಷರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.