ಕಾರ್ಕಳ: ಕಾರ್ಕಳ-ಹೆಬ್ರಿ-ಉಡುಪಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿನ ಶಿವತಿಕೆರೆ ದೇವಸ್ಥಾನದ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಹೊಟೇಲ್ ಕೃಷ್ಣ ವೈಭವ ಶುದ್ಧ ಸಸ್ಯಾಹಾರಿ ಹೊಟೇಲ್ ನಾಳೆ(ಮೇ.23) ಗುರುವಾರ ಬೆಳಗ್ಗೆ 9.30ಕ್ಕೆ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ಉದ್ಘಾಟನೆಗೊಳ್ಳಲಿದೆ.
ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ನೂತನ ಹೊಟೇಲ್ ಕೃಷ್ಣ ವೈಭವ ಉದ್ಘಾಟಿಸಲಿದ್ದಾರೆ.
ಹೊಟೇಲ್ ಕೃಷ್ಣ ವೈಭವದಲ್ಲಿ ವಿಶಾಲವಾದ ಪಾರ್ಕಿಂಗ್ ಸೌಲಭ್ಯದ ಜತೆಗೆ ಸಾಂಪ್ರದಾಯಿಕ ವಿನ್ಯಾಸದ ಕಟ್ಟಡ ಹಾಗೂ ವಿಸ್ತಾರವಾದ ಆಕರ್ಷಕ ಒಳಾಂಗಣದ ವಿನ್ಯಾಸದ ಮೆರುಗಿನ ಜತೆ ಗ್ರಾಹಕರ ಅಭಿರುಚಿ ಹಾಗೂ ಆಯ್ಕೆಗೆ ತಕ್ಕಂತೆ ಉತ್ಕೃಷ್ಟ ದರ್ಜೆಯ ಶುಚಿ ರುಚಿಯಾದ ನಾರ್ಥ್ ಇಂಡಿಯನ್, ಸೌತ್ ಇಂಡಿಯನ್ ಶೈಲಿಯ ವಿವಿಧ ಬಗೆಯ ಖಾದ್ಯಗಳು, ಚೈನೀಸ್, ತಂದೂರ್, ಐಸ್ ಕ್ರೀಂ,ಫ್ರೆಶ್ ಜ್ಯೂಸ್,ಪಿಜ್ಜಾ, ಸ್ಯಾಂಡ್ ವಿಚ್ ಕೃಷ್ಣ ವೈಭವದ ವಿಶೇಷತೆಯಾಗಿದೆ.
ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡದೇ ಗ್ರಾಹಕರಿಗೆ ಸದಾ ನಗುಮೊಗದ ಸೇವೆಯೇ ಸಂಸ್ಥೆಯ ಗುರಿಯಾಗಿದ್ದು, ವಿಶೇಷವಾಗಿ ಕಾರ್ ಸರ್ವೀಸ್,ಡೋರ್ ಡೆಲಿ ವರಿ ಹಾಗೂ ಕ್ಯಾಟರಿಂಗ್ ಸರ್ವಿಸ್ ವ್ಯವಸ್ಥೆ ಇದೆ ಎಂದು ಸಂಸ್ಥೆಯ ಮಾಲಕರಾದ ಶ್ರೀಕರ ತಂತ್ರಿ ಹೇಳಿದ್ದಾರೆ.