ಕಾರ್ಕಳ: ಕಳೆದ ಒಂದು ದಶಕದಿಂದ ಕಾರ್ಕಳ ಆಸುಪಾಸಿನಲ್ಲಿ ಮನೆಮಾತಾಗಿರುವ ಹಾಗೂ ಗ್ರಾಹಕರಿಗೆ ನಗುಮೊಗದ ಸೇವೆ ನೀಡುತ್ತಿರುವ ಕಾರ್ಕಳದ ಶಿವಂ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ನ ಅಜೆಕಾರು ಶಾಖೆಯು ಮೇ 10 ರಂದು ಅಕ್ಷಯ ತೃತೀಯ ಶುಭ ದಿನದಂದು ಶುಭಾರಂಭಗೊಳ್ಳಲಿದೆ.
ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಹಕಾರಿ ಸೌಧ ಕಟ್ಟಡದಲ್ಲಿ ಸುಮಾರು 2 ಸಾವಿರ ಚದರ ಅಡಿಯ ವಿಶಾಲವಾದ ನವೀಕೃತ ಮಳಿಗೆ ಬೆಳಗ್ಗೆ 10 ಗಂಟೆಗೆ ಪೂಜೆ ಹಾಗೂ ಧಾರ್ಮಿಕ ವಿಧಿಗಳೊಂದಿಗೆ ಉದ್ಘಾಟನೆಗೊಳ್ಳಲಿದೆ.
ಶುಭಾರಂಭದ ಪ್ರಯುಕ್ತ ಎಲ್ಲಾ ಗೃಹೋಪಯೋಗಿ ವಸ್ತುಗಳು ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ.
ವಿಶಾಲವಾದ ಮಳಿಗೆಯಲ್ಲಿ ಗ್ರಾಹಕರ ಆಯ್ಕೆಗೆ ತಕ್ಕಂತೆ ಬ್ರಾಂಡೆಡ್ ಉಪಕರಣಗಳು ರಿಯಾಯಿತಿ ದರದಲ್ಲಿ ಲಭ್ಯವಿವೆ. ಇದಲ್ಲದೇ ಬ್ಯಾಂಕ್ ಸಾಲ, ಬಜಾಜ್ ಫೈನಾನ್ಸ್, ಟಿವಿಎಸ್ ಫೈನಾನ್ಸ್, ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಇ.ಎಂ.ಐ ಸೌಲಭ್ಯ ಸಿಗಲಿದೆ.
ಇದಲ್ಲದೇ ಮಾರಾಟದ ನಂತರದ ಸೇವೆ ನೀಡುವಲ್ಲಿ ಶಿವಂ ಎಲೆಕ್ಟ್ರಾನಿಕ್ಸ್ ಮುಂಚೂಣಿಯಲ್ಲಿದ್ದು, ಗ್ರಾಹಕರ ಹಿತಕಾಯುವುದೇ ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದು ಸಂಸ್ಥೆಯ ಮಾಲಕರಾದ ಅಜೆಕಾರು ಗುರುಪ್ರಸಾದ್ ಹೇಳಿದ್ದಾರೆ.
