ಕಾರ್ಕಳ: ಕಳೆದ ಎರಡು ದಿನಗಳಿಂದ ಬಿರುಸು ಪಡೆದ ಮಳೆ ಕಾರ್ಕಳ ತಾಲೂಕಿನಾದ್ಯಂತ ಭಾರೀ ಆವಾಂತರ ಸೃಷ್ಟಿಸಿದೆ. ಬುಧವಾರ ತಡರಾತ್ರಿ ಹಾಗೂ ಗುರುವಾರ ಮುಂಜಾನೆ ಭಾರೀ ಗಾಳಿಮಳೆಗೆ ಹಲವೆಡೆ ಮನೆಗಳ ಮೇಲೆ ಮರಬಿದ್ದಉ ಹಾನಿಯಾದರೆ, ಬಿರುಗಾಳಿಯ ಹೊಡೆತಕ್ಕೆ ಅಡಿಕೆ ಕೃಷಿಗೆ ಅಪಾರ ನಷ್ಟ ಸಂಭವಿಸಿದೆ.
ಕಾರ್ಕಳ ಅಮರಜ್ಯೋತಿ ಕ್ಲಿನಿಕ್ ಬಳಿಯ ಅನಂತಪದ್ಮನಾಭ ಭಟ್ ಅವರ ಮನೆಗೆ ತೆಂಗಿನ ಮರ ಉರುಳಿ ಸುಮಾರು 20 ಸಾವಿರ ನಷ್ಟ ಸಂಭವಿಸಿದೆ, ಕಣಂಜಾರು ಗ್ರಾಮದ ವನಜ ಹಾಗೂ ವಾರಿಜ ನಾಯಕ್ ಎಂಬವರ ಮನೆಗೆ ಮರ ಬಿದ್ದು ತಲಾ 10 ಸಾವಿರ ನಷ್ಟ ಸಂಭವಿಸಿದೆ. ಮಾಳ ಗ್ರಾಮದ ಸುಂದರ ಪೂಜಾರಿ ಎಂಬವರ ಮನೆಗೆ ಗೇರು ಮರ ಬಿದ್ದು 20 ಸಾವಿರ ನಷ್ಟ ಸಂಭವಿಸಿದರೆ, ಮರ್ಣೆ ಗ್ರಾಮದ ಅಜೆಕಾರಿನÀ ಮೇರಿ ಮಸ್ಕರೇನ್ಹಸ್ ಅವರ ಮನೆಗೆ ಮರ ಬಿದ್ದು ಸುಮಾರು 25 ಸಾವಿರ ನಷ್ಟ ಸಂಭವಿಸಿದೆ.
ಭಾರೀ ಬಿರುಗಾಳಿಯ ಹೊಡೆತಕ್ಕೆ ಕೆರ್ವಾಶೆ ಗ್ರಾಮದ ಶಾಂತ ನಾಯ್ಕ್ ಎಂಬವರ ಅಡಿಕೆ ತೋಟದ 45 ಅಡಿಕೆ ಮರಗಳು ಬಿದ್ದು sಸುಮಾರು 15 ಸಾವಿರ ನಷ್ಟ ಸಂಭವಿಸಿದೆ.
ಬಿರುಗಾಳಿ ಸಹಿತ ಮಳೆಗೆ ಮೆಸ್ಕಾಂಗೆ ಅಪಾರ ನಷ್ಟ
ಕಳೆದ ಒಂದು ವಾರದಿಂದ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಾದ್ಯಂತ ಹಲವೆಡೆ ಭಾರೀ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಲೈನ್ ಗಳ ಮೇಲೆ ಮರ ಬಿದ್ದು ಹಲವಾರು ವಿದ್ಯುತ್ ಕಂಬಗಳು ಧರಾಶಾಹಿಯಾಗಿ ಮೆಸ್ಕಾಂಗೆ ಅಪಾರ ನಷ್ಟ ಸಂಭವಿಸಿದೆ. ಪದೇಪದೇ ಬಿರುಗಾಳಿ ಸಹಿತ ಮಳೆಯಾಗುವ ಹಿನ್ನಲೆಯಲ್ಲಿ ಮೆಸ್ಕಾಂ ಸಿಬ್ಬಂದಿಗಳು ಗಾಳಿ ಮಳೆ ಎನ್ನದೇ ಲೈನ್ ದುರಸ್ತಿಯಲ್ಲಿ ತೊಡಗಿದ್ದಾರೆ