ಕಾರ್ಕಳ: ಕ್ರೀಡೆ ಹಾಗೂ ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಿಟ್ಟೆಯ ಅವಳಿ ಸಹೋದರರಾದ ಆಯುಷ್ ಅರುಣ್ ಕೆ. ಹಾಗೂ ಅನುಷ್ ಅರುಣ್ ಕೆ.ಅವರನ್ನು ನಿಟ್ಟೆ ಬಿಲ್ಲವ ಸೇವಾ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಆನುಷ್ ಅರುಣ್ ಕೆ 9ನೇ ತರಗತಿಯಲ್ಲಿ 97.4% ಪಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದು, ವಿವೊ ಇಗ್ನೈಟ್ ಟೆಕ್ನಲಾಜಿ ಮತ್ತು ಇನ್ನೊವೇಟ್ ಅವಾರ್ಡ್ ಇಂಡಿಯಾದ ಟಾಪ್ 10ರಲ್ಲಿ ಆಯ್ಕೆಯಾಗಿದ್ದಾರೆ.
ಶೊರೀನ್ ರಿಯೋ ಕರಾಟೆ ಅಸೋಷಿಯೇಷನ್ ಆಶ್ರಯದಲ್ಲಿ ಮೂಡುಬಿದಿರೆಯಲ್ಲಿ ನಡೆದ ಕರಾಟೆ ಕಾರ್ನಿವಲ್ ನಲ್ಲಿ 1000ಮೀಟರ್ ಡಿಸ್ಟೆನ್ಸ್ ಸೆಡ್ ಕಿಕ್ ಇನ್ ಶಾರ್ಟಸ್ಟ್ ಡ್ಯುರೇಷನ್ ವಿಭಾಗದಲ್ಲಿ ನೊಬೆಲ್ ವಿಶ್ವದಾಖಲೆ ಮಾಡಿದ್ದಾರೆ.ಕರಾಟೆಯಲ್ಲಿ ಫರ್ಸ್ಟ್ ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದಿದ್ದು ಶೊರೀನ್ ರಿಯೋ ಕರಾಟೆ ಅಸೋಸಿಯೇಷನ್ ನಲ್ಲಿ ರೆಫೆರೀ ತರಭೇತಿ ಪಡೆದು ಕರಾಟೆ ರೇಫರೀ ಆಂಡ್ ಜಡ್ಜ್ ಫಾರ್ ಕುಮಿಟೆ ಯಾಗಿ ಉತ್ತೀರ್ಣರಾಗಿದ್ದಾರೆ.
2023 ರಲ್ಲಿ ಉಡುಪಿಯಲ್ಲಿ ನಡೆದ ರಾಶ್ರಿತ ಮಟ್ಟದ ಹೈಫೈವ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಎರಡು ಚಿನ್ನದ ಪದಕ,2022ರಲ್ಲಿ ನಡೆದ COMPETE 3.0 ಕರಾಟೆ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ, 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಟೆಕ್ವಾಂಡೊ ವೆಸ್ಟರ್ಸ್ ಕಪ್ ನ್ಯಾಷನಲ್ ಲೆವೆಲ್ ನಲ್ಲಿ ಎರಡು ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.