ಕಾರ್ಕಳ: ತೋಟದಲ್ಲಿ ಮೇಯುತ್ತಿದ್ದ ದನಗಳಿಗೆ ಸಿಡಿಲು ಬಡಿದ ಪರಿಣಾಮ ಎರಡು ದನಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಸಂಜೆ 4.30ರ ಸುಮಾರಿಗೆ ಏಕಾಎಕಿ ಅಪ್ಪಳಿಸಿದ ಸಿಡಿಲಿಗೆ ತೋಟದ ಕಟ್ಟಿ ಹಾಕಿದ್ದ ದನಗಳು ಸ್ಥಳದಲ್ಲೇ ಅಸು ನೀಗಿವೆ.
ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಕಾರೋಲ್ ಗುಡ್ಡೆ ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ಮೆಲ್ವಿನ್ ಮೆಂಡೋನ್ಸಾ ಅವರ ಎರಡು ಹಸುಗಳು ಸಿಡಿಲಾಘಾತಕ್ಕೆ ಬಲಿಯಾಗಿದ್ದು, ತೋಟದಲ್ಲಿ ಅನತಿ ದೂರದಲ್ಲಿ ಕೆಲಸ ಮಾಡುತ್ತಿದ್ದ ಮೆಲ್ವಿನ್ ಹಾಗೂ ಅವರ 4ರ ಹರೆಯದ ಮಗನಿಗೂ ಸಿಡಿಲಿನ ಆಘಾತವಾಗಿದ್ದು ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.