ಉಡುಪಿ : ರಥಬೀದಿಯ ಪರಿಸರ ಯಾತ್ರಾರ್ಥಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.ಶ್ರೀಕೃಷ್ಣ ಮಠಕ್ಕೆ ಬಂದಿರುವ ಮಹಿಳೆ ವಿಶ್ರಾಂತಿ ಪಡೆಯಲು ಬಂದಿದ್ದ ಯಾತ್ರರ್ಥಿ ಉಳಿದು ಕೊಳ್ಳುವ ಹಾಲ್ ಒಂದರಲ್ಲಿ ಸಾವನಪ್ಪಿದ್ದಾರೆ.
ಮಧ್ಯಾಹ್ನ ಊಟಕ್ಕೆ ತಾಯಿ ಎಬ್ಬಿಸಿದಾಗ ಮಹಿಳೆ ಎಚ್ಚರಗೊಂಡಿರಲಿಲ್ಲ. ಪ್ರಯಾಣದ ಆಯಾಸದಿಂದ ಗಾಢ ನಿದ್ದೆಗೆ ಜಾರಿರಬಹುದೆಂದು ಸುಮ್ಮನಾಗಿದ್ದರು. ಮಹಿಳೆ ಸಂಜೆಯಾದರೂ ಎದ್ದೇಳದೆ ಇರುವುದರಿಂದ, ಮತ್ತೊಮ್ಮೆ ಎಬ್ಬಿಸಿದಾಗ, ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿತು. ಮಾಹಿತಿ ತಿಳಿದ ಸ್ಥಳೀಯವರಾದ ಜಯಪ್ರಕಾಶ್ ಕಿಣಿಯವರು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಬಂದ ಒಳಕಾಡುವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಮಹಿಳೆ ಅದಾಗಲೇ ಮೃತಪಟ್ಟಿರುವುದನ್ನು ದೃಢೀಕರಿಸಿದರು.
ಮೃತ ಮಹಿಳೆ ಶ್ರೀರಂಗಪಟ್ಟಣದ ನಿವಾಸಿ ವಸಂತಿ (55ವ) ಎಂದು ತಿಳಿದುಬಂದಿದೆ. ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದೆ. ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.