ಉಡುಪಿ, ಸೆಪ್ಟೆಂಬರ್ 27: ಎಕೆಎಂಎಸ್ ಬಸ್ ಮಾಲೀಕ, ಉದ್ಯಮಿ, ಆತ್ರಾಡಿ ನಿವಾಸಿ ಸೈಪುದ್ದೀನ್ ಎಂಬಾತನನ್ನು ದುಷ್ಕರ್ಮಿಗಳ ತಂಡವು ಭೀಕರವಾಗಿ ಹತ್ಯೆಗೈದ ಘಟನೆ ಮಲ್ಪೆ ಕೊಡವೂರಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಹಾಡಹಗಲೇ ಮಲ್ಪೆಯ ಕೊಡವೂರಿನ ಮನೆಯೊಂದರಲ್ಲಿ ಪಿಸ್ತೂಲ್‌ನಿಂದ ಶೂಟ್ ಮಾಡಿ ಬಳಿಕ ತಲವಾರಿನಿಂದ ಕೊಚ್ಚಿ ಕೊಲೆಗೈಯ್ಯಲಾಗಿದೆ. ಸೈಫುದ್ದೀನ್‌ನ ಸಹಚರನೇ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.