Share this news

 

 

 

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಕುಂದಾಪುರದ ಕೊರ್ಗಿಯ ಸಂದೀಪ್ (34), ಬೇಳೂರು ಶ್ರೀರಾಜ್(33), ಮೋಳಹಳ್ಳಿ ಮಧುಕರ್ (44) ಎಂದು ಗುರುತಿಸಲಾಗಿದೆ.

ಆರೋಪಿಗಳು ನಗರದ ಅಜ್ಜರಕಾಡು ಭುಜಂಗ ಪಾರ್ಕ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸ್ಮಾರ್ಟ್ ಫೋನ್ ಮೂಲಕ ಏ 23 ರಂದು ಹೈದರಾಬಾದಿನ ರಾಜೀವ್‌ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ SRH (ಸನ್ ರೈಸರ್ಸ್ ಹೈದರಾಬಾದ್) ಮತ್ತು MI (ಮುಂಬೈ ಇಂಡಿಯನ್ಸ್) ತಂಡಗಳ ನಡುವೆ ನಡೆಯುವ IPL T20 ಕ್ರಿಕೆಟ್ ಮ್ಯಾಚ್‌ಗೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಅಕ್ರಮವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಾ ಇತರೇ ಬೇರೆ ಬೇರೆ ವ್ಯಕ್ತಿಗಳಿಗೆ ಕರೆ ಮಾಡಿ ಅವರವರ ತಂಡವನ್ನು ತಿಳಿಸಿ ಅವರಿಂದ ಹಣವನ್ನು ಸಂಗ್ರಹ ಮಾಡುತ್ತಾ ಅವರಿಗೆ ಅಕ್ರಮ ಬೆಟ್ಟಿಂಗ್‌ ಅಪ್ಲಿಕೇಶನನ್ನು ಡೌನ್‌ಲೋಡ್ ಮಾಡಿ ಕೊಟ್ಟಿದ್ದು, ಇವರ ಬಳಿ ಸಾರ್ವಜನಿಕರಿಂದ ಆಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಸಂಗ್ರಹ ಮಾಡಿದ ನಗದು ಹಣ ರೂ.81,700, 4 ಮೊಬೈಲ್ ಅಂದಾಜು ಮೌಲ್ಯ ರೂ. 1,35,000 ಮತ್ತು ಕೃತ್ಯಕ್ಕೆ ಉಪಯೋಗಿಸಿದ ಕೆಎ-20-ಎಂ.ಎಫ್-1440 ನೇ ಕಾರು ಮೌಲ್ಯ ರೂ.10 ಲಕ್ಷ ಒಟ್ಟು ಸುಮಾರು ರೂ.12.16 ಲಕ್ಷ ಮೊತ್ತದ ಸೊತ್ತುಗಳನ್ನು ಸೆನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

 

 

 

 

Leave a Reply

Your email address will not be published. Required fields are marked *