ಕಾರ್ಕಳ: ಈ ಬಾರಿಯ ಲೋಕಸಭಾ ಚುನಾವಣೆಗೆ ಕಾರ್ಕಳ ತಾಲೂಕು ಆಡಳಿತವು ಸರ್ವಸಿದ್ದತೆ ಮಾಡಿಕೊಳ್ಳುತ್ತಿದ್ದು ನಾಳೆ ಕಾರ್ಕಳ ಮಂಜುನಾಥ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮಸ್ಟರಿಂಗ್ ಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಬಾರಿ ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಚುನಾವಣಾ ಕರ್ತವ್ಯಕ್ಕೆ ಖಾಸಗಿ ಶಾಲೆಗಳ ಬಸ್ ಗಳನ್ನು ಬಳಕೆ ಮಾಡಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 209 ಮತಗಟ್ಟೆಗಳಿದ್ದು ಒಟ್ಟು 57 ಬಸ್ಸುಗಳನ್ನು ಬಳಸಲಾಗುತ್ತದೆ.ಈಗಾಗಲೇ ಎಲ್ಲಾ ಬಸ್ ಗಳಿಗೆ ಜಿಪಿಎಸ್ ಅಳವಡಿಕೆ ಪೂರ್ಣಗೊಂಡಿದ್ದು ಗುರುವಾರ ನಡೆಯುವ ಮಸ್ಟರಿಂಗ್ ಕಾರ್ಯಕ್ಕೆ ಸಿದ್ದಗೊಂಡಿವೆ. ಒಟ್ಟು 209 ಮತಗಟ್ಟೆಗಳ ಪೈಕಿ 27 ಮತಗಟ್ಟೆಗಳನ್ನು ಅತಿಸೂಕ್ಷ್ಮ ,2 ದುರ್ಬಲ , 5 ಸಖಿ ಮತಗಟ್ಟೆ,,ತಲಾ 1 ಮತಗಟ್ಟೆಯನ್ನು ವಿಕಲಚೇತನರಿಗೆ ಹಾಗೂ ಯತ್ನಿಕ್ ಬೂತ್ ಗಳಾಗಿ ವಿಂಗಡಿಸಲಾಗಿದೆ. ಉಳಿದ ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳಾಗಿವೆ.
ಒಂದು ಬೂತ್ ನಲ್ಲಿ ಓರ್ವ ಪಿಆರ್’ಒ,ಎಪಿಆರ್’ಒ ,ಇಬ್ಬರು ಸಿಬ್ಬಂದಿಗಳು,ಓರ್ವ ಡಿ ಗ್ರೂಪ್ ಹಾಗೂ ಓರ್ವ ಪೊಲೀಸ್ ಸಿಬ್ಬಂದಿ ಇರುತ್ತಾರೆ. ಇದಲ್ಲದೇ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಶಾಂತಿಯುತ ಮತದಾನಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಕಾರ್ಕಳ ತಾಲೂಕು ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿ ನರಸಪ್ಪ ತಹಶಿಲ್ದಾರ್ ಹೇಳಿದ್ದಾರೆ.
ಒಟ್ಟಿನಲ್ಲಿ ದೇಶದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬಕ್ಕೆ ಮತದಾರರು ಉತ್ಸುಕರಾಗಿದ್ದು, ಎಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸೋಣ ಎನ್ನುವುದು ಕರಾವಳಿನ್ಯೂಸ್ ಆಶಯವಾಗಿದೆ