Share this news

ಉಡುಪಿ : ರೋಟರಿ ಉಡುಪಿ ಪ್ರಾಯೋಜಿತ ನಿಟ್ಟೂರು ಹೈಸ್ಕೂಲ್ ಇಂಟರಾಕ್ಟ ಕ್ಲಬ್ ನ ಪದಗ್ರಹಣ ಸಮಾರಂಭವು ನಿಟ್ಟೂರು ಹೈಸ್ಕೂಲ್ ನಲ್ಲಿ ನೆರವೇರಿತು.

ರೋಟರಿ ಉಡುಪಿ ಅದ್ಯಕ್ಷ ರೋ. ಗುರುರಾಜ ಭಟ್ ರವರು ಇಂಟರಾಕ್ಟ್ ಅಧ್ಯಕ್ಷೆ ಯಶಸ್ವಿನಿ ಮತ್ತು ಕಾರ್ಯದರ್ಶಿ ನಿರೀಕ್ಷಾ ಅವರಿಗೆ ಪದಪ್ರಧಾನ ನೆರೆವೆರಿಸಿ ವಿದ್ಯಾರ್ಥಿ ಗಳು ಪರಿಸರದ ಬಗ್ಗೆ ಕಾಳಜಿ ವಹಿಸಬೇಕೆಂದು ಕರೆನೀಡಿ, ಹೊಸತಂಡಕ್ಕೆ ಶುಭಹಾರೈಸಿದರು.

ಇಂಟರಾಕ್ಟ ಅದ್ಯಕ್ಷೆ ಯಶಸ್ವಿನಿ ತಮ್ಮ ತಂಡದ ಪರಿಚಯ ಮಾಡಿದರು. ವಲಯ ಸೇನಾನಿ ರೋ. ಹೇಮಂತ್ ಯು. ಕಾಂತ್ ಅವರು ‘ಹೋರಾಟದ ಬದುಕಿನಲ್ಲಿ ಮನೋಬಲವೆಂಬ ಜತೆಗಾರ’ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನುಸೂಯ, ಶಿಕ್ಷಕ ಸಂಯೋಜಕ ಶ್ರೀ ದೇವದಾಸ ಶೆಟ್ಟಿ, ರೋಟರಿ ಉಡುಪಿಯ ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

                        

                          

                        

                          

 

`

Leave a Reply

Your email address will not be published. Required fields are marked *