ಉಡುಪಿ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿಯೊಬ್ಬರು ಹಿರಿಯಡ್ಕ ಸಮೀಪದ ಜಿಲ್ಲಾ ಕಾರಾಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅನೂಪ್ ಶೆಟ್ಟಿ ಮೃತಪಟ್ಟ ವಿಚಾರಣಾಧೀನ ಕೈದಿ ಕಳೆದ 2021 ರ ಜುಲೈನಲ್ಲಿ ಕುಂದಾಪುರದ ಕಾಳಾವರ ಗ್ರಾಮದಲ್ಲಿ ವ್ಯವಹಾರದ ಪಾಲುದಾರ ಅಜೇಂದ್ರ ಶೆಟ್ಟಿ ಎಂಬುವವರನ್ನು ಕೊಲೆಗೈದ ಅನೂಪ್ ಶೆಟ್ಟಿ ಬಳಿಕ ಪರಾರಿಯಾಗಿದ್ದ.ಬಳಿಕ ಉಡುಪಿ ಪೊಲೀಸರು ಕೆಲವು ದಿನಗಳ ನಂತರ ಅನೂಪ್ ಶೆಟ್ಟಿಯನ್ನು ಗೋವಾದಲ್ಲಿ ಬಂಧಿಸಿ ಜೈಲಿಗಟ್ಟಿದ್ದರು.
ಈ ನಡುವೆ ವಿಚಾರಣೆ ಎದುರಿಸುತ್ತಿದ್ದ ಅನೂಪ್ ಶೆಟ್ಟಿ ಕಳೆದ ಶನಿವಾರ ಜೈಲಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅವರು ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅವರ ಹಠಾತ್ ಸಾವಿನ ಹಿಂದಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಅನೂಪ್ ಶೆಟ್ಟಿ ಶನಿವಾರ ಉಡುಪಿ ಜೈಲಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಹಿರಿಯಡ್ಕ ಠಾಣೆ ಪೊಲೀಸರು ಸಿಆರ್ಪಿಸಿ ಸೆಕ್ಷನ್ 176ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





