Share this news

ಉಡುಪಿ: ಪತಿ ಹಾಗೂ ಆತನ ಮನೆಯವರು ಹಣ ನೀಡುವಂತೆ ಪೀಡಿಸಿ, ಜೀವ ಬೆದರಿಕೆ ಒಡ್ಡಿದ ಬಗ್ಗೆ ತೆಂಕನಿಡಿಯೂರು ಗ್ರಾಮದ ಸ್ವಾತಿ ಎಂಬವರು ನೀಡಿದ ದೂರಿನಂತೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೀತಿಸಿ ಮದುವೆಯಾಗಿದ್ದ ಯೋಗೀಶ್ ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಕಳೆದುಂಡಿದ್ದು, ವಿಪರೀತ ಸಾಲ ಮಾಡಿದ್ದ. ತಾಯಿ ಮನೆಯಿಂದ ಹಣ ತರುವಂತೆ ಪತ್ನಿಗೆ ಪೀಡಿಸುತ್ತಿದ್ದ. ಪತ್ನಿಯ ಒಡವೆಗಳನ್ನು ಅಡವಿಟ್ಟಿದ್ದಲ್ಲದೆ, ಆಕೆಗೆ ದೈಹಿಕ ಹಿಂಸೆ ಮಾಡುತ್ತಿದ್ದ. ಯೋಗೀಶ್‌ನ ಸಾಲವನ್ನು ಮರುಪಾವತಿಸಬೇಕು, ಇಲ್ಲವಾದಲ್ಲಿ ಮನೆಯಿಂದ ಹೊರ ಹಾಕುವುದಾಗಿ ಆತನ ತಾಯಿ, ತಮ್ಮ, ಅಕ್ಕ ಎಲ್ಲರೂ ಸೇರಿ ಸ್ವಾತಿ ಮೇಲೆ ಒತ್ತಡ ಹಾಕುತ್ತಿದ್ದರು. ಇದುವರೆಗೆ ಸಾಲ ಮಾಡಿಸಿ ಹಾಗೂ ಬಲವಂತವಾಗಿ 46 ಲಕ್ಷ ರೂ.ಯನ್ನು ಪತ್ನಿಯಿಂದ ಯೋಗೀಶ್ ಪಡೆದುಂಡಿದ್ದ.

ಸ್ವಾತಿ ಬೆಂಗಳೂರಿನಿAದ ಪೆರ್ಡೂರಿನಲ್ಲಿರುವ ಗಂಡನ ಮನೆಗೆ ಬಂದಿದ್ದಾಗ, ಪತಿಯ ಮನೆಯವರೆಲ್ಲರೂ ಸೇರಿ ಹಣ ಕೊಡದಿದ್ದಲ್ಲಿ ಮನೆಗೆ ಬರುವುದು ಬೇಡ ಎಂದು ಹೊರ ಹಾಕಿದ್ದಾರೆ. ಅಲ್ಲದೆ ಯೋಗೀಶ್ ಕರೆ ಮಾಡಿ ಪತ್ನಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *